ಕಾಸರಗೋಡು: ಈ ಬಾರಿ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಹಸುರು ಸಂಹಿತೆಯ ಪಾಲನೆಯೊಂದಿಗೆ ಜರಗಲಿರುವುದು ಇಲ್ಲಿನ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿದೆ.
ಹಸುರು ಸಂಹಿತೆ ಸಮಿತಿ ಈ ಬಗೆಗಿನ ಹೊಣೆ ಹೊತ್ತು ಕರ್ತವ್ಯದಲ್ಲಿದೆ. ಕಲೋತ್ಸವ ಸಂಬಂಧ ಬ್ಯಾಡ್ಜ್, ಪೆನ್‍ಗಳಿಂದ ಕಸದ ತೊಟ್ಟಿವರೆಗೆ, ತೆಂಗಿನ ಮಡಲಿನ ಚಪ್ಪರದಿಂದ ಬಟ್ಟೆ ಚೀಲದ ವರೆಗೆ ಎಲ್ಲವೂ ಪ್ರಕೃತಿ ಸ್ನೇಹಿ ಸಾಮಾಗ್ರಿಗಳಿಂದ ತಯಾರಿಸಿ ಬಳಸಲು ನಿರ್ಧರಿಸಲಾಗಿದೆ.
ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಟುಂಬಶ್ರೀಯ ಸಹಾಯದೊಂದಿಗೆ ಬಳಕೆಯಿಲ್ಲದ, ಹಳೆ ಸೀರೆಗಳನ್ನು ಸಂಗ್ರಹಿಸಿ, ಅದರಿಂದ 3 ಸಾವಿರ (ಸೀರೆಯಿಂದ ನಿರ್ಮಿಸಿದ) ಚೀಲ ತಯಾರಿಸಿ, ಕಲೋತ್ಸವದ ಪ್ರೇಕ್ಷಕರಿಗೆ ಉಚಿತವಾಗಿ ವಿತರಿಸಲು ತೀರ್ಮಾನಿಸಲಾಗಿದೆ. ಜಾಗೃತಿಯ ಅಂಗವಾಗಿ ಹಸುರು ರಸಪ್ರಶ್ನೆ ನಡೆಸಲೂ ಹಸುರು ಸಂಹಿತೆ ಸಮಿತಿ ನಿರ್ಧರಿಸಿದೆ. ಜೊತೆಗೆ ಫ್ಲಾಷ್ ಮೋಬ್, ಬೀದಿ ನಾಟಕ ಇತ್ಯಾದಿಗಳನ್ನೂ ಪ್ರಸ್ತುತಪಡಿಸಲಾಗುವುದು.
ಕಲೋತ್ಸವದ ಅಂಗವಾಗಿ ಸ್ಥಾಪಿಸಲಾಗುವ ಪ್ರದರ್ಶನ ಮಳಿಗೆ ಇತ್ಯಾದಿಗಳಲ್ಲಿ ಬಳಸಿ ಬಿಸುಟುವ ಲೋಟ, ತಟ್ಟೆ ಸಹಿತ ಸಾಮಾಗ್ರಿಗಳನ್ನು ಬಳಸಕೂಡದು ಎಂದು ನಿಬಂಧನೆ ಹೇರಲಾಗಿದೆ. ಬದಲಾಗಿ ತೊಳೆದು ಮತ್ತೆ ಬಳಸಬಲ್ಲ ಸ್ಟೀಲ್, ಗಾಜು ಇತ್ಯಾದಿಗಳ ತಟ್ಟೆ, ಲೋಟ ಬಳಸಲಾಗುವುದು.
ಪ್ಲಾಸ್ಟಿಕ್‍ಗೆ ಪೂರ್ಣ ನಿಷೇಧ : ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣರೂಪದಲ್ಲಿ ನಿಷೇಧಿಸಿ ಈ ಕಲೋತ್ಸವ ನಡೆಯಲಿದೆ. ಪ್ಲಾಸ್ಟಿಕ್ ನಿರ್ಮಿತ ಲಕೋಟೆ ಇತ್ಯಾದಿಗಳೊಂದಿಗೆ ಬರುವವರನ್ನು ಕಲೋತ್ಸವದ ಚಪ್ಪರದಡಿ ಆಗಮಿಸಲು ಅನುಮತಿ ನೀಡುವುದಿಲ್ಲ. ತೆಂಗಿನ ಮಡಲು, ಬಟ್ಟೆ, ಬಣ್ಣದ ಕಾಗದ ಸಹಿತ ಪ್ರಕೃತಿ ಸ್ನೇಹಿ ಸಾಮಾಗ್ರಿಗಳನ್ನು ಬಳಸಿ ವೇದಿಕೆಗಳ ಅಲಂಕಾರ ನಡೆಸಲಾಗುವುದು.
250 ಹಸುರು ಸಂಹಿತೆ ಸ್ವಯಂಸೇವಕರು : ಕಲೋತ್ಸವವನ್ನು ಪೂರ್ಣರೂಪದಲ್ಲಿ ಪ್ರಕೃತಿ ಸ್ನೇಹಿ ಸಮಾರಂಭವಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ(ಎನ್.ಎಸ್.ಎಸ್) 250 ಸ್ವಯಂಸೇವಕರು ಅಣಿಯಾಗಲಿದ್ದಾರೆ. ಇವರಿಗಾಗಿ ವಿಶೇಷ ತರಬೇತಿ ನೀಡುವ ನಿಟ್ಟಿನಲ್ಲಿ ನ.19ರಂದು ಕಾಂಞಂಗಾಡ್ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಒಂದು ದಿನದ ತರಬೇತಿ ನಡೆಯಲಿದೆ.