ಕಾಸರಗೋಡು: ಕೇರಳ ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ನಡೆಸಿದ ಆಡಳಿತೆ ಭಾಷಾ ಸಪ್ತಾಹದ ಸಮಾರೋಪ ಸಮಾರಂಭ ಅಂಗವಾಗಿ ಕನ್ನಡದ ಇಬ್ಬರು ಸಾಧಕರ ಸಹಿತ ೪ ಮಂದಿ ಪ್ರತಿಭಾನ್ವಿತ ಹಿರಿಯರನ್ನು ಗೌರವಿಸಲಾಯಿತು.
ಜಿಲ್ಲಾಡಳಿತೆ, ಜಿಲ್ಲಾ ವಾರ್ತಾ ಇಲಾಖೆ ಕಚೇರಿ, ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆ ವಿಭಾಗ, ಮಲೆಯಾಳಂ ವಿಭಾಗ, ಕಾಸರಗೋಡು ಸರಕಾರಿ ಕಾಲೇಜು ಜಂಟಿ ವತಿಯಿಂದ ಈ ಸಮಾರಂಭ ನಡೆಯಿತು.
ಶುಕ್ರವಾರ ಕಾಸರಗೋಡು ಸರಕಾರಿ ಕಾಲೇಜಿನ ವಿಚಾರಸಂಕಿರಣ ಸಭಾಂಗಣದಲ್ಲಿ ಜರುಗಿದ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎ.ಎಲ್.ಅನಂತ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಕನ್ನಡದ ಹಿರಿಯ ಸಾಹಿತಿ, ಸಂಶೋಧಕ ಡಾ.ಉಪ್ಪಂಗಳ ಶಂಕರನಾರಾಯಣ ಭಟ್, ಹಿರಿಯ ನೃತ್ಯ ಗುರು ಶಶಿಕಲಾ ಟೀಚರ್, ಮಲೆಯಾಳಂ ನ ಹಿರಿಯ ಸಾಹಿತಿ ಕೆ.ಕೆ.ಪಿ. ಪೊದುವಾಳ್, ಹಿರಿಯ ಚಿತ್ರ ಕಲಾವಿದೆ ಅಮ್ಮಾಳು ಅಮ್ಮ ಅವರನ್ನು ಗೌರವಿಸಲಾಯಿತು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆ ವಿಭಾಗ ಉಪನ್ಯಾಸಕ ಡಾ.ರತ್ನಾಕರ ಮಲ್ಲಮೂಲೆ, ಜಿಲ್ಲಾ ವಾರ್ತಾ ಇಲಾಖೆಯ ಕನ್ನಡ ಮಾಹಿತಿ ಸಹಾಯಕ ವೀಜಿ ಕಾಸರಗೋಡು, ಕಾಸರಗೋಡು ಸರಕಾರಿ ಕಾಲೇಜಿನ ಮಲೆಯಾಳಂ ವಿಭಾಗ ಸಹಾಯಕ ಪ್ರಾಚಾರ್ಯ ರಾಜೀವನ್ ಕರಿವೆಳ್ಳೂರು, ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ಸಂಪಾದಕ ರಶೀದ್ ಬಾಬು ಅಭಿನಂದನ ಭಾಷಣ ಮಾಡಿದರು. ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ, , ಕಾಸರಗೋಡು ಸರಕಾರಿ ಕಾಲೇಜಿನ ಮಲೆಯಾಳಂ ವಿಭಾಗ ಮುಖ್ಯಸ್ಥ ಪಿ.ಉಣ್ಣಿಕೃಷ್ಣನ್, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮಲೆಯಾಳಂ ವಿಭಾಗ ಮುಖ್ಯಸ್ಥ ಡಾ.ಆರ್.ಚಂದ್ರಬೋಸ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ವಾರ್ತಾ ಧಿಕಾರಿ ಮಧುಸೂದನನ್ ಎಂ. ಸ್ವಾಗತಿಸಿದರು. ಜಿಲ್ಲಾ ವಾರ್ತಾಇಲಾಖೆ ಸಿಬ್ಬಂದಿ ಟಿ.ಕೆ.ಕೃಷ್ಣನ್ ವಂದಿಸಿದರು. ಸಪ್ತಾಹ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.