ಮಂಜೇಶ್ವರ: ಹರಿತ ಕೇರಳಂ ಮಿಷನ್ ನ ಚಟುವಟಿಕೆಗಳ ಅಂಗವಾಗಿ ವರ್ಕಾಡಿ ಗ್ರಾಮ ಪಂಚಾಯತಿಯ 5 ಸೆಂಟ್ಸ್ ಜಾಗದಲ್ಲಿ "ಹಸುರು ವನ"ದ ಉದ್ಘಾಟನೆ ಗುರುವಾರ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಉದ್ಘಾಟಿಸಿದರು. ಉಪಾಧ್ಯಕ್ಷೆ ಸುನಿತಾ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಥಾಯೀ ಸಮಿತಿಗಳ ಅಧ್ಯಕ್ಷೆಯರಾದ ರಹಮತ್ ರಝಾಕ್, ತುಳಸೀ ಕುಮಾರಿ, ಜೆಸಿಂತಾ ಡಿಸೋಜಾ, ಸದಸ್ಯರಾದ ಹ್ಯಾರಿಸ್ ಪಾವೂರು, ಪೂರ್ಣಿಮಾ ಎಸ್.ಬೆರಿಂಜ, ವಸಂತ ಎಸ್., ಗೀತಾ ವಿ.ಸಾಮಾನಿ, ಮೈಮೂನಾ ಅಹಮ್ಮದ್, ಸೀತಾ ಡಿ., ಇಂದಿರಾ ಕೆ., ಭಾರತಿ ಎಸ್., ಗೋಪಾಲಕೃಷ್ಣ ಪಜ್ವ., ಸದಾಶಿವ ನಾಯಕ್, ಆನಂದ ಟಿ., ಸಿಬ್ಬಂದಿಗಳಾದ ಜಯಪ್ರಕಾಶ್, ಸುಧಾಮಣಿ, ಅನ್ವರ್ ಎ., ಅಶೋಕ, ಆಶಾಲತಾ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜೇಶ್ವರಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಾಧಾಕೃಷ್ಣ ಪಿಳ್ಳೆ ವಂದಿಸಿದರು.