ಕಾಸರಗೋಡು: ಈ ವರ್ಷದ ವಿಶೇಷಚೇತನರ ದಿನಾಚರಣೆಯನ್ನು ಕಾಸರಗೋಡು ಮಾರ್ತೋಮಾ ಕಿವುಡರ ವಿದ್ಯಾಲಯದಲ್ಲಿ ಶೀಘ್ರದಲ್ಲಿ ನಡೆಸಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಈ ಸಂಬAಧ ನಡೆದ ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಕೆ.ಅಜೇಷ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಅಂಗವಾಗಿ ಸುಗಮ ಸಂಗೀತ, ಭಾಷಣ, ಕಥಾ ವಾಚನ, ಕವನ ವಾಚನ, ಸಿನಿಮಾ ಹಾಡು, ಮಿಮಿಕ್ರಿ, ಕಥಾ ರಚನೆ, ಕವಿತಾ ರಚನೆ, ಸಾಮೂಹಿಕ ನೃತ್ಯ, ಜಾನಪದ ನೃತ್ಯ, ಕೂಚುಪುಡಿ, ಚಿತ್ರ ರಚನೆ, ಒಪ್ಪನ, ಮಾಪಿಳ್ಳೆಹಾಡುಗಳು ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ. ವೈಯಕ್ತಿಕ ನೆಲೆಯಲ್ಲಿ ಮತ್ತು ಗುಂಪಿನ ಹಿನ್ನೆಲೆಯಲ್ಲಿ ಒಂದು ಶಾಲೆಯಿಂದ ಸಬ್ ಜ್ಯೂನಿಯರ್, ಜ್ಯೂನಿಯರ್, ಸೀನಿಯರ್ ವ್ಯತ್ಯಾಸವಿಲ್ಲದೆ ಸ್ಪರ್ಧೆಗಳು ಜರುಗಲಿವೆ. ನ.೧೫ರ ಸಂಜೆ ೫ ಗಂಟೆಗೆ ಮುಂಚಿತವಾಗಿ ಹೆಸರು ನೋಂದಣಿ ನಡೆಸಬೇಕು.
ಸಂಘಟನಾ ಸಮಿತಿ ಪದಾಧಿಕಾರಿಗಳು: ಅಧ್ಯಕ್ಷ-ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಸಂಚಾಲಕ-ಜಿಲ್ಲಾ ಸಮಾಜನೀತಿ ಅಧಿಕಾರಿ ಬಿ.ಭಾಸ್ಕರನ್.
ಸಭೆಯಲ್ಲಿ ಜಿಲ್ಲಾ ಸಮಾಜನೀತಿ ಅಧಿಕಾರಿ ಬಿ.ಭಾಸ್ಕರನ್, ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.