ಮಂಜೇಶ್ವರ: ಕೇರಳ ಏರ್ ಕಂಡೀಶನ್ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಶಿನ್ ವಲಯಗಳಲ್ಲಿ ಕಾರ್ಯನಿರ್ವಹಿಸುವ ತಾಂತ್ರಿಕ ಪರಿಣಿತರ(ಟೆಕ್ನೀಶಿಯನ್) ಸಂಘಟನೆಯಾದ ಎಚ್‌ವಿಎಸಿಆರ್ ಎಂಪ್ಲೋಯೀಸ್ ಎಸೋಸಿಯೇಶನ್ ಕೇರಳ ಇದರ ಮಂಜೇಶ್ವರ ತಾಲೂಕು ಸಮ್ಮೇಳನ ಶುಕ್ರವಾರ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ನಡೆಯಿತು. ಸಂಗಟನೆಯ ರಾಜ್ಯ ಕೌನ್ಸಿಲರ್ ಶಿವಕುಮಾರ್ ಸಮ್ಮೇಳನ ಉದ್ಘಾಟಿಸಿದರು. ಶಂಕರ್ ಪಂಡಿತ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ತಂಬಿಪೋಳ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಮಂಜೇಶ್ವರ ತಾಲೂಕು ಘಟಕದ ಕಾರ್ಯದರ್ಶಿ ಶಶಿಧರ ವರದಿ ವಾಚಿಸಿದರು. ಜಿಲ್ಲಾ ಉಪಾಧ್ಯಕ್ಷ ವಿಘ್ನೇಶ್, ಜಿಲ್ಲಾ ಕಾರ್ಯದರ್ಶಿ ಕಿಶೋರ್ ಕುಮಾರ್, ವಲಯ ಕಾರ್ಯದರ್ಶಿ ನಿತಿನ್ ಕಾಂಞÂAಗಾಡ್, ಕೋಶಾಧಿಕಾರಿ ಅರವಿಂದ್ ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘಟನೆಯ ಮಂಜೇಶ್ವರ ತಾಲೂಕು ಘಟಕದ ನೂತನ ಸಮಿತಿ ರೂಪಿಸಲಾಯಿತು. ಕೆಬೀರ್(ಅಧ್ಯಕ್ಷ), ಮುನಾವರ್(ಉಪಾಧ್ಯಕ್ಷ), ಕಿಶೋರ್ ಕುಮಾರ್ (ಕಾರ್ಯದರ್ಶಿ), ಚೇತನ್ ಬಡಾಜೆ(ಜೊತೆ ಕಾರ್ಯದರ್ಶಿ), ರಫೀಕ್(ಖಜಾಂಜಿ) ಅವರನ್ನು ಆರಿಸಲಾಯಿತು. ಸಭೆಯಲ್ಲಿ ಐವರು ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರವೀಣ್ ಕನಿಲ ಸ್ವಾಗತಿಸಿ, ಶಶಿಧರ ವಂದಿಸಿದರು.