ಮಂಜೇಶ್ವರ: ಕುಂಬಳೆಯ ಸೂರಂಬೈಲು ಸಮೀಪದ "ಶ್ರೀ ಶಡ್ರಂಪಾಡಿ ಗೋಪಾಲಕೃಷ್ಣ ದೇವಸ್ಥಾನ"ದಲ್ಲಿ ಕಾರ್ತಿಕಮಾಸ ದೀಪಾರಾದನೆಯ ವಿಶೇಷ ಸಂದರ್ಭ ಇತ್ತೀಚೆಗೆ 'ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು' ತಂಡದಿಂದ 'ನರಕಾಸುರ ವಧೆ' ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರು ಶ್ರೀ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಬಾಲಕೃಷ್ಣ ಆಚೆಗೋಳಿ, ವಿನಯಕಿರಣ ಶರ್ಮ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಶ್ರೀಕೃಷ್ಣನಾಗಿ ರಾಜಾರಾಮ ರಾವ್ ಮೀಯಪದವು, ದೇವೇಂದ್ರನ ಪಾತ್ರದಲ್ಲಿ ಯೋಗೀಶ ರಾವ್ ಚಿಗುರುಪಾದೆ, ನಾರದನಾಗಿ ವೇದಮೂರ್ತಿ ಗಣೇಶ ನಾವಡ ಮೀಯಪದವು, ನರಕಾಸುರನ ಪಾತ್ರದಲ್ಲಿ ಅವಿನಾಶ ಹೊಳ್ಳ ವರ್ಕಾಡಿ, ಹಾಗೂ ಗುರುರಾಜ ಹೊಳ್ಳ ಬಾಯಾರು, ಮುರಾಸುರನಾಗಿ ಗುರುಪ್ರಸಾದ ಹೊಳ್ಳ ತಿಂಬರ, ಸತ್ಯಭಾಮೆಯಾಗಿ ವಿಘ್ನೇಶ ಕಾರಂತ ಶಿರಿಯ ಭಾಗವಹಿಸಿದ್ದರು.