ಬದಿಯಡ್ಕ: ದೈಹಿಕ ಚಟುವಟಿಕೆಯು ಮನಸ್ಸಿನ ಆರೋಗ್ಯಕ್ಕೆ ಪೂರಕ. ಆರೋಗ್ಯವೆಂದರೆ ಕಾಯಿಲೆ ರಹಿತವಾಗಿರುವುದು ಎಂದಷ್ಟೇ ಅಲ್ಲ, ಉತ್ತಮ ವ್ಯಾಯಾಮದ ಅಭ್ಯಾಸದಿಂದ ನಾವು ದೈಹಿಕವಾಗಿಯೂ ಮಾನಸಿಕವಾಗಿಯೂ ಸದೃಢವಾಗಿರಲು ಸಾಧ್ಯವಿದೆ. ವ್ಯಾಯಾಮವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮಗೆ ಅನಾರೋಗ್ಯವುಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಯಮಿತ ವ್ಯಾಯಾಮವು ದಿನನಿತ್ಯದ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ನಿವೃತ್ತ ಪೆÇಲೀಸ್ ಅಧಿಕಾರಿ ಶಿವರಾಮ ಅಭಿಪ್ರಾಯ ಪಟ್ಟರು.
ಅವರು 'ಪ್ರತಿಭೆಯೆಡೆಗೆ ಶಾಲೆ' ಎಂಬ ಆಶಯದಡಿಯಲ್ಲಿ ನೀರ್ಚಾಲಿನ ತಮ್ಮ ಮನೆಗೆ ನವೆಂಬರ್ 14ರಂದು ಭೇಟಿ ನೀಡಿದ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಅವರು ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದ ನೀರ್ಚಾಲು ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಎನ್.ಆರ್ ಳನ್ನು ಸನ್ಮಾನಿಸಿದರು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ ಯಚ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ಎಸ್, ಅಧ್ಯಾಪಕರಾದ ಕೃಷ್ಣಪ್ರಸಾದ ತಲೆಂಗಳ, ಶೈಲಜಾ ಎ, ಸಂತೋಷ ಪಿ ಯಚ್ ಉಪಸ್ಥಿತರಿದ್ದರು.