ಕುಂಬಳೆ: ಬಂದ್ಯೋಡು ಸಮೀಪದ ವೀರನಗರ ಎಂಬಲ್ಲಿ ಅಡ್ಕ ಶ್ರೀ ಬೀರಮಾರ್ಲರ (ಉಳ್ಳಾಕ್ಲು )ಮಾಡ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಭಾನುವಾರ ದಾರಂದ ಮಹೂರ್ತ ನೆರವೇರಿತು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ದಾರಂದವನ್ನು ಪ್ರತಿಷ್ಠಾಪಿಸಲಾಯಿತು. ಇದೇ ವೇಳೆ ವಿಜ್ಞಾಪನ ಪತ್ರ ಬಿಡುಗಡೆ ಹಾಗೂ ಒಡಿಯೂರು ಶ್ರೀ ಕ್ಷೇತ್ರದಿಂದ ಶ್ರೀ ಬೀರಮಾರ್ಲರ ಮಾಡದ ಜೀರ್ಣೋದ್ಧಾರ ಕಾರ್ಯಗಳಿಗೆ ಧನಸಹಾಯವನ್ನು ನೀಡುವ ಮೂಲಕ ಪ್ರಥಮ ಹಂತದ ನಿಧಿ ಸಂಚಯನಕ್ಕೆ ಚಾಲನೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಡ್ಕ ಶ್ರೀ ಬೀರಮಾರ್ಲರ (ಉಳ್ಳಾಕ್ಲು )ಮಾಡದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಮಲಾರ್ ಜಯರಾಮ ರೈ, ದಯಾನಂದ ಬೆಳ್ಚಪ್ಪಾಡ, ಚಂದ್ರಪ್ರಭಾ ಹೆಗ್ಡೆ, ಭಗವಾನ್‌ದಾಸ್, ಹರೀಶ್ ಮಾಡ, ಗಿರಿಧರ ವೀರನಗರ, ಬಾಲಕೃಷ್ಣ ವೀರನಗರ, ಆನಂದ ವೀರನಗರ, ತುಳಸೀದಾಸ್, ಸಾಯಿಭದ್ರಾ ರೈ, ದೈವದ ಪದಾಧಿಕಾರಿಗಳಾದ ಶಂಕರ ಅಡ್ಕ, ಮಾಧವ ಅಡ್ಕ ಮೊದಲಾದವರು ಉಪ್ಥಿತರಿದ್ದರು. ಹರೀಶ್ ಮಾಡ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ರೇಣುಕಾ.ಎಸ್.ರೈ ಪ್ರಾರ್ಥನೆ ಹಾಡಿದರು. ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಹೆಗ್ಡೆ ವಂದಿಸಿದರು.
ಅಡ್ಕದ ಗುತ್ತು ಕುಟುಂಬಸ್ಥರು ಹಾಗೂ ಊರ ಹತ್ತು ಸಮಸ್ತರ ಸಂಯುಕ್ತ ಅಶ್ರಯದಲ್ಲಿ ಅಡ್ಕ ಶ್ರೀ ಉಳ್ಳಾಕ್ಲು ಮಾಡ ನಿರ್ಮಾಣಗೊಳ್ಳುತ್ತಿದೆ. ಜಿರ್ಣೋದ್ಧಾರ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಶ್ರೀಕೇತ್ರದ ಸಾನಿಧ್ಯ ವೃದ್ಧಿ ಹಾಗೂ ದೋಷ ಪರಿಹಾರಗಳಿಗಾಗಿ ವೇದಮೂರ್ತಿ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಸುದರ್ಶನ ಹೋಮ ಸಹಿತ ವಿವಿಧ ವೈದಿಕ ವಿಧಿ ವಿಧಾನಗಳನ್ನು ಗುರುವಾರ ನಡೆಸಲಾಗಿತ್ತು.