ಬದಿಯಡ್ಕ: ಕ್ಷೇತ್ರ, ಮಠಗಳು ದೇಹದ ಮಾನಸಿಕ ಸ್ಥಿರತೆ, ಬೌದ್ದಿಕತೆಯನ್ನು ಉದ್ದೀಪಿಸುವ, ದುಃಖವನ್ನು ನಿವಾರಿಸುವ ಶಕ್ತಿ ಕೇಂದ್ರಗಳಾಗಿವೆ. ಕಾಲಾಕಾಲಕ್ಕೆ ಸಾಮಾಜಿಕ ಸ್ಥಿರತೆಯನ್ನು ಕಾಯ್ದುಕೊಂಡು ಧನಾತ್ಮಕವಾಗಿ ಸಮಾಜವನ್ನು ಮುನ್ನಡೆಸುವಲ್ಲಕಿ ಮಠ-ಮಂದಿರಗಳು ರಾಷ್ಟ್ರಾದ್ಯಂತ ತನ್ನದೇ ಕೊಡುಗೆಗಳ ಮೂಲಕ ಶ್ರೀಮಂತ ಸಂಸ್ಕøತಿ-ನಾಗರೀಕತೆಯನ್ನು ಕಟ್ಟಿಬೆಳೆಸಿದೆ ಎಂದು ಸಂಸದ ರಾಜಮೋಹನ ಉಣ್ಣಿತ್ತಾನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಮದ್ ಎಡನೀರು ಮಠದಲ್ಲಿ ಶನಿವಾರ ನಡೆದ ಶ್ರೀಮದ್ ಈಶ್ವರಾನಂದ ಭಾರತೀ ಶ್ರೀಗಳ ಆರಾಧನಾ ಮಹೋತ್ಸವದ ಅಂಗವಾಗಿ ಸಂಜೆ ನಡೆದ ಆರಾಧನಾ ಮಹೋತ್ಸವ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸನಾತನ ಸಂಸ್ಕøತಿಯು ಜಗತ್ತಿನ ಇತರ ಎಲ್ಲಾ ಮತ, ಸಂಸ್ಕøತಿಗಳಿಂದ ವಿಭಿನ್ನವಾದ ಶ್ರೀಮಂತ ಧಾರ್ಮಿಕ,ಸಾಂಸ್ಕøತಿಕ, ಸಾಮಾಜಿಕ ಪರಂಪರೆಹೊಂದಿದ್ದು, ಸರ್ವ ಜನರ ಒಳಿತಿಗಾಗಿ ಪ್ರಾರ್ಥಿಸುವ ಏಕೈಕ ಧರ್ಮವಾಗಿದೆ. ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯು ಸನಾತನತೆಯ ಉತ್ಕøಷ್ಟತೆಯಾಗಿದ್ದು, ಇಂತಹ ಪರಂಪರೆಯನ್ನು ಮುನ್ನಡೆಸಿದ ಋಷಿ-ಸನ್ಯಾಸಿ ಪರಂಪರೆಗಳು ಎಂದಿಗೂ ಪೂಜನೀಯ ಎಂದು ಅವರು ತಿಳಿಸಿದರು. ಕಲಿಯುಗದ ಈಶ್ವರಾನುಗ್ರಹದ ಮೂಲವು ಆರಾಧನೆ, ಧ್ಯಾನದಲ್ಲಿ ಅಡಕವಾಗಿದೆ. ಇಂದಿನ ಸಮಾಜ ಎದುರಿಸುವ ನೋವು-ನಲಿವುಗಳಲ್ಲಿ ಪ್ರತಿಸ್ಪಂದಿಸುವ ಶ್ರೀಮದ್ ಎಡನೀರು ಮಠದ ಪರಂಪರೆ ಸನಾತನತೆಯ ಮುಕುಟವಾಗಿದ್ದು, ರಾಷ್ಟ್ರದ ಸಾರ್ವಭೌಮತೆಯ ಕಾಪಿಡುವಿಕೆಯಲ್ಲಿ ಮಠದ ಕೊಡುಗೆ ಅಜರಾಮರವಾಗಿ ಸದಾ ವಂದನೀಯವಾಗಿದೆ ಎಂದರು. ಸನ್ಯಾಸ ಪರಂಪರೆಯ ಇಂದು ನಮ್ಮೊಂದಿಗಿರದ ಹಿರಿಯರನ್ನು ನೆನಪಿಸುವ ಆರಾಧನೋತ್ಸವವು ದುರಿತಗಳಿಂದ ಪಾರುಗೊಳಿಸುವ ಅನುಗ್ರಹದೊಂದಿಗೆ ಸಮಾಜ, ರಾಷ್ಟ್ರವನ್ನು ಮುನ್ನಡೆಸಲಿ ಎಂದು ಅವರು ಹಾರೈಸಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಮಾತನಾಡಿ, ಶ್ರೀಶಂಕರ ಪರಂಪರೆಯ ರಾಜ್ಯದ ಏಕೈಕ ಪ್ರಾಚೀನವೂ ಆಗಿರುವ ಮಠವಾಗಿರುವ ಶ್ರೀಎಡನೀರು ಮಠ ಜಾತಿ-ಮತಗಳ ಬೇಧವಿಲ್ಲದೆ ಸಮಾಜವನ್ನು ಪರಂಪರೆಯ ಮಾರ್ಗದಲ್ಲಿ ಮುನ್ನಡೆಸುತ್ತಿರುವುದು ಈ ಮಣ್ಣಿಗೆ ಲಭ್ಯವಾದ ಪುಣ್ಯವಾಗಿದೆ. ತಂತ್ರಜ್ಞಾನ, ವಿಜ್ಞಾನ ಸಹಿತ ಎಲ್ಲಾ ರಂಗಗಳಲ್ಲಿ ಸಮಾಜ ಇಂದು ಮೈಮರೆತಿರುವಾಗ ಪರಂಪರೆ, ಸಂಸ್ಕøತಿಗಳಂತಹ ಜೀವನ ಪಥವನ್ನು ಬೋಧಿಸಿ ನೆಮ್ಮದಿಯ ತಾಣವಾಗಿರುವ ಶ್ರೀಮಠ ಜಿಲ್ಲೆಯ ಹೆಮ್ಮೆ ಎಂದು ತಿಳಿಸಿದರು.
ಉದುಮ ಶಾಸಕ ಕೆ.ಕುಞÂ್ಞರಾಮನ್ ಮುಖ್ಯ ಅತಿಥಿಗಳಳಾಗಿ ಉಪಸ್ಥಿತರಿದ್ದರು. ಹಿರಿಯ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಬೆಂಗಳೂರು ಅವರನ್ನು ಈ ಸಂದರ್ಭ ಅಭಿನಂದಿಸಿ ಗೌರವಿಸಲಾಯಿತು. ವೈದಿಕ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣಗೈದರು. ಸಂಸ್ಕøತ ವಿದ್ವಾಂಸ ರಾಜಗೋಪಾಲ ಪುಣಿಚಿತ್ತಾಯ ಪುಂಡೂರು ಅವರು ಗುರುವಂದನೆ ನಡೆಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ, ಮೆರವಣಿಗೆ, ಮಧ್ಯಾಹ್ನ ಮಹಾಪೂಜೆ, ವೃಂದಾವನ ಪೂಜೆ, ಪ್ರಸಾದ ವಿತರಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆಯರಾದ ಎಡನೀರು ಸಹೋದರಿಯರು ಮತ್ತು ತಂಡದಿಂದ ನೃತ್ಯ ಸಿಂಚನ ನಡೆಯಿತು. ನ.26 ರಂದು ರಾತ್ರಿ 8 ರಿಂದ ಶ್ರೀಮಠದಲ್ಲಿ ಲಕ್ಷದೀಪೋತ್ಸವ ನಡೆಯಲಿದೆ.