HEALTH TIPS

ಒತ್ತಡ ಮುಕ್ತ ಅಧ್ಯಯನಕ್ಕೆ ಸಂಸ್ಕಾರಭರಿತ ಬೋಧನೆಗಳೇ ಅಡಿಪಾಯ : ಬಾಲಸುಬ್ರಹ್ಮಣ್ಯ ಸರ್ಪಮಲೆ

             ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಒತ್ತಡ ಮುಕ್ತ ಅಧ್ಯಯನ ಮತ್ತು ಹದಿಹರೆಯದ ಸಮಸ್ಯೆಗಳು ವಿಚಾರ ಕಾರ್ಯಾಗಾರ
     ಬದಿಯಡ್ಕ: ಆಧುನಿಕ ವಿದ್ಯಾಭ್ಯಾಸದಲ್ಲಿ ಅತೀ ಅಗತ್ಯವಾಗಿ ದೊರಕದೇ ಇರುವ ಅತೀ ಅಮೂಲ್ಯವಾದ ಸಂಸ್ಕಾರಭರಿತ ಬೋಧನೆಗಳಿಂದ ಈಗಿನ ಮಕ್ಕಳು ವಂಚಿತರಾಗುತ್ತಿದ್ದಾರೆ. ಮನೆಯಲ್ಲಿ ಅಜ್ಜ, ಅಜ್ಜಿ ಮೊದಲಾದ ಹಿರಿಯರಿಂದ ದೊರಕಬಹುದಾದಂತಹ ಮಾರ್ಗನದರ್ಶನಗಳೂ ಕುಂಠಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇಶಾನುಸಾರ ಸಂಘಟಿತಗೊAಡಿರುವ ವಿದ್ಯಾರ್ಥಿವಾಹಿನಿಯ ನೇತೃತ್ವದಲ್ಲಿ ಮುಳ್ಳೇರಿಯ ಮಂಡಲದ ಪ್ರೌಢ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಕಾರ್ಯಾಗಾರವನ್ನು ಹಮ್ಮಿಕೊಂಡಿರುತ್ತೇವೆ ಎಂದು ಮುಳ್ಳೇರಿಯ ಮಂಡಲ ಅಧ್ಯಕ್ಷ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಹೇಳಿದರು.
       ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ವತಿಯಿಂದ ಭಾನುವಾರ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಿದ ಒತ್ತಡ ಮುಕ್ತ ಅಧ್ಯಯನ ಮತ್ತು ಹದಿಹರೆಯದ ಸಮಸ್ಯೆಗಳು ವಿಚಾರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಆಧುನಿಕತೆಯ ಭರಾಟೆಯಲ್ಲಿ ಒತ್ತಡವನ್ನು ಹೆಚ್ಚಿಸುತ್ತಾ ಅಂಕಗಳಿಕೆಯ ಕಲಿಕೆಯಲ್ಲಿ ದಾಪುಗಾಲಿಡುತ್ತಾ ಚಲಿಸುತ್ತಿರುವ ಹದಿಹರೆಯದ ಮಕ್ಕಳಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತದೆ. ಸೂಕ್ತ ಕಾಲಕ್ಕೆ ಅನುಭವೀ ಹಿರಿಯರಿಂದ ಮುಕ್ತಮನಸ್ಸಿನ ಚರ್ಚೆಯೊಂದಿಗೆ ಅರ್ಥಪೂರ್ಣವೂ ಆರೋಗ್ಯದಾಯಕವೂ ಆದ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಸೂಕ್ತ ವೇದಿಕೆಯನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಗುರುಗಳ ಸಂಕಲ್ಪದAತೆ ಸಾಕಾರಗೊಳ್ಳುತ್ತಿರುವ ಭಾರತೀಯ ವಿದ್ಯಾರ್ಜನೆಗಾಗಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಾಹಿತಿಯನ್ನು ನೀಡಿದರು.
ಮಹಾಮಂಡಲ ಮುಷ್ಟಿಭಿಕ್ಷಾ ವಿಭಾಗ ಪ್ರಧಾನ ಮೀನಗದ್ದೆ ಶ್ರೀಕೃಷ್ಣ ಭಟ್ ಧ್ವಜಾರೋಹಣಗೈದರು. ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಅಧ್ಯಕ್ಷತೆ ವಹಿಸಿದ್ದರು. ಮಂಡಲ ಮಾತೃವಿಭಾಗ ಪ್ರಧಾನೆ ಕುಸುಮ ಪೆರ್ಮುಖ, ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಶುಭಹಾರೈಸಿದರು. ಶಿಕ್ಷಣ ತಜ್ಞ ಉಂಡೆಮನೆ ವಿಶ್ವೇಶ್ವರ ಭಟ್ ಮತ್ತು ಉಪಬೋಧೆ ತಜ್ಞೆ ವಿದ್ಯಾ ಎಸ್. ತರಗತಿ ನಡೆಸಿಕೊಟ್ಟರು. ವಿವಿಧ ವಲಯಗಳಿಂದ ಒಟ್ಟು ೫೮ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಂಡಲ ವಿದ್ಯಾರ್ಥಿ ವಾಹಿನೀ ವಿಭಾಗ ಪ್ರಧಾನ ಗುರುಮೂರ್ತಿ ಮೇಣ ಸ್ವಾಗತಿಸಿ, ಪಳ್ಳತ್ತಡ್ಕ ವಲಯ ವಿದ್ಯಾರ್ಥಿ ವಾಹಿನೀ ವಿಭಾಗ ಪ್ರಧಾನ ಈಶ್ವರ ಭಟ್ ಸರ್ಪಂಗಳ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries