ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ 22 ನೇ ವಾರ್ಡಿನ ಸುನಾಮಿ ಕಾಲೋನಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮ ಪಂಚಾಯತಿ ಸದಸ್ಯ ಕೆ.ಸುಧಾಕರ ಕಾಮತ್ ಅವರು ಮಾತನಾಡಿ, ಮಕ್ಕಳು ದೇಶದ ಭವಿಷ್ಯ. ಮಕ್ಕಳು ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆದು ವಿವಿಧ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೀನ ದಲಿತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಬೆಳೆಸಿ ದೇಶದ ಭವಿಷ್ಯವನ್ನು ರೂಪಿಕರಿಸಬೇಕು. ಅರಿವಿನ ವಿಸ್ತಾರತೆಯ ಅವಕಾಶವನ್ನು ಸದುಪಯೋಗಪಡಿಸಿ ಭವಿಷ್ಯ ರೂಪಣೆಯಲ್ಲಿ ಮಹತ್ವದ ಸಾಧನೆ ಸಾಧಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಹಾಗು ಮಕ್ಕಳ ಹೆತ್ತವರು ಭಾಗವಹಿಸಿದರು. ಬಳಿಕ ಸಿಹಿ ತಿಂಡಿಯನ್ನು ವಿತರಿಸಲಾಯಿತು.ಅಂಗನವಾಡಿ ಕಾರ್ಯಕರ್ತೆಯಾದ ಕುಸುಮ ಸ್ವಾಗತಿಸಿ, ವಂದಿಸಿದರು.