HEALTH TIPS

ಕೇರಳ ರಾಜ್ಯ ಶಾಲಾ ಕಲೋತ್ಸವ-ಇಂದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ

   
      ಕಾಸರಗೋಡು: ಕೇರಳ ರಾಜ್ಯ 60ನೇ ಶಾಲಾ ಕಲೋತ್ಸವದ ಅಂಗವಾಗಿ ನವೆಂಬರ್ 29ರಂದು ಕಂದಾಯ ಜಿಲ್ಲಾ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ನವೆಂಬರ್ 29ರಂದು ರಜೆ ನೀಡಲಾಗಿದೆ. ಕಲೋತ್ಸವದಲ್ಲಿ ಭಾಗವಹಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ರಜೆ ಘೋಷಿಸಲಾಗಿದೆ. ಕಲೋತ್ಸವ ನಡೆಯುವ ವಿವಿಧ ವೇದಿಕೆಗಳಿಗೆ ತಲುಪುವ ನಿಟ್ಟನಲ್ಲಿ 60ಬಸ್‍ಗಳನ್ನು ನಿಯೋಜಿಸಲಾಗಿದೆ.
      ಕಲೋತ್ಸವ ನಗರಿಯಲ್ಲಿರುವ ವೇದಿಕೆ,  ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ, ಸಮಯದ ಬಗ್ಗೆ ಮಾಹಿತಿ ನೀಡುವ ವಾಟ್ಸ್‍ಆಪ್ ಸಿದ್ಧಪಡಿಸಲಾಗಿದ್ದು, ಸ್ಪರ್ಧಾಳುಗಳಿಗೆ ಹಾಗೂ ಪ್ರೇಕ್ಷಕರಿಗೆ ಇದು ಸಹಕಾರಿಯಾಗುತ್ತಿದೆ. ಕಲೋತ್ಸವದ ಮುಖ್ಯ ವೇದಿಕೆ ಸನಿಹ ಮೀಡಿಯಾ ಸೆಂಟರ್ ಕಾರ್ಯಾಚರಿಸುತ್ತಿದ್ದು, ದೃಶ್ಯ ಹಾಗೂ ಪತ್ರಿಕಾ ಮಾಧ್ಯಮದವರಿಗೆ ಹೆಚ್ಚು ಸಹಕರಿಯಾಗುತ್ತಿದೆ. ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ರಾಜ್ಯದಿಂದ ಆಗಮಿಸಿರುವ ಪತ್ರಕರ್ತರಿಗಾಗಿ  ಕಲೋತ್ಸವದ ಸಮಗ್ರ ಮಾಹಿತಿ, ಸ್ಪರ್ಧಾ ವಿವರ, ಪೆನ್, ನೋಟ್‍ಪ್ಯಾಡ್ ಒಳಗೊಂಡ ವಿಶೇಷ ಕಿಟ್ ವಿತರಿಸಲಾಯಿತು. ನೂರಕ್ಕೂ ಹೆಚ್ಚು ಸ್ಟಾಲ್‍ಗಳು ಕಲೋತ್ಸವನಗರಿಯಲ್ಲಿ ಕಾರ್ಯಾಚರಿಸುತ್ತಿದೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕಸ ವಿಲೇವಾರಿಗಾಗಿ ತೆಂಗಿನಗರಿಯಿಂದ ತಯಾರಿಸಿದ ಬುಟ್ಟಿಗಳನ್ನು ಅಲ್ಲಲ್ಲಿ ಇರಿಸಲಾಗಿದೆ. ಮುಖ್ಯ ವಏದಿಕೆಯಿಂದ ಅನತಿದೂರದಲ್ಲಿರುವ ಸಾಬರ್‍ಮತಿ ಹೆಸರಿನ ಭೋಜನಶಾಲೆಯಲ್ಲಿ ನೂರಾರು ಮಂದಿಗೆ ಏಕ ಕಾಲಕ್ಕೆ ಆಹಾರ ಸೇವಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. 15ಕ್ಕೂ ಹೆಚ್ಚು ಕೌಂಟರ್‍ಗಳನ್ನು ನಿರ್ಮಿಸಲಾಗಿದ್ದು, ಯಾವುದೇ ನೂಕುನುಗ್ಗಲು, ಗೊಂದಲಕ್ಕೆ ಅವಕಾಶವಿಲ್ಲದೆ ಆಹಾರ ವಿತರಿಸಲಾಗುತ್ತಿದೆ.
     ಕಲೋತ್ಸವ ನಗರಿಯಲ್ಲಿ ಹೆಚ್ಚುತ್ತಿರುವ ಧೂಳಿನ ಸಮಸ್ಯೆಯಿಂದ ಪಾರಾಗಲು ಪ್ರೇಕ್ಷಕರು, ಅಧಿಕಾರಿಗಳು ಹಾಗೂ ಸ್ಪರ್ಧಾಳುಗಳುಟವೆಲ್ ಹಾಗೂ  ಮುಖ ಗವಚದಿಂದ ರಕ್ಷಿಸಿಕೊಳ್ಳಬೇಕಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries