HEALTH TIPS

ಡಯಟ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ-ಸಾಹಿತ್ಯ ಮನಸ್ಸಿನ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ-ಡಾ.ರತ್ನಾಕರ ಮಲ್ಲಮೂಲೆ


      ಕುಂಬಳೆ: ಕನ್ನಡ ಭಾಷೆ ಸಾಹಿತ್ಯಕ್ಕೆ ಮಹತ್ವದ ಪರಂಪರೆಯಿದೆ. ಬಲಿಷ್ಠವಾದ ಸಾಂಸ್ಕೃತಿಕ ಹಿನ್ನೆಲೆಯಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡ ಕವಿಶ್ರೇಷ್ಠರು ನಮ್ಮಲ್ಲಿದ್ದಾರೆ. ಆದುದರಿಂದಲೇ ಕನ್ನಡದ ವಚನ ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಗೌರವಕ್ಕೆ ಪಾತ್ರವಾಯಿತು ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
    ಮಾಯಿಪ್ಪಾಡಿಯ ಶಿಕ್ಷಕ ಶಿಕ್ಷಣ ತರಬೇತಿ ಕೇಂದ್ರ(ಡಯಟ್)ನಲ್ಲಿ ಶನಿವಾರ ನಡೆದ ೬೪ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
     ಸಾಹಿತ್ಯ ಮನುಷ್ಯನಿಗೆ ಬದುಕುವ ಕಲೆಯನ್ನು ತಿಳಿಸುತ್ತದೆ. ತಂತ್ರಜ್ಣಾನ ನಮ್ಮ ಬದುಕಿನ ದಾರಿಯನ್ನು ಸುಲಭಗೊಳಿಸಿದರೆ ಸಾಹಿತ್ಯ ನಮ್ಮ ಮಾನಸಿಕ ಆರೋಗ್ಯವನ್ನು ಸದಾ ಕಾಪಾಡುತ್ತದೆ. ಕನ್ನಡದ ಜನಪದ ತ್ರಿಪದಿಗಳು, ವಚನಗಳು, ಕೀರ್ತನೆಗಳು ಜೀವನಸಂದೇಶವನ್ನು ಬದುಕಿನ ಮಹತ್ವವನ್ನು ಸಾರಿದ ಶ್ರೇಷ್ಠ ಸಾಹಿತ್ಯಗಳು. ಇಂದಿನ ಜನಾಂಗ ಇಂತಹ ಮೌಲ್ಯಯುತ ಕೃತಿಗಳನ್ನು ಓದದೆ , ಅಧ್ಯಯನ ಮಾಡದೆ ಇರುವುದರಿಂದ ಹಲವು ಕೌಟುಂಬಿಕ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
    ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ  ಕನ್ನಡ ಜಿಲ್ಲೆಯು ಕನ್ನಡ ಮತ್ತು ತುಳು ಸಾಹಿತ್ಯ ಕ್ಕೆ ಕೊಟ್ಟ ಕೊಡುಗೆ ಮಹತ್ವದ್ದು. ಈ ಪರಂಪರೆಯನ್ನು ಉಳಿಸುವ ಹೊಣೆ ಇಂದಿನ ಅಧ್ಯಾಪಕರಿಗೆ ವಿದ್ಯಾರ್ಥಿಗಳಿಗೆ ಮತ್ತು ಸಾಹಿತಿಗಳಿಗಿದೆ. ಕನ್ನಡ ಶಾಲೆಗಳು ಕನ್ನಡದ ಬೆನ್ನೆಲುಬು. ನಮ್ಮ ಮಕ್ಕಳಿಗೆ ಕನ್ನಡ ಭಾಷೆ ಸಾಹಿತ್ಯದ ರುಚಿ ಹಂತಹAತವಾಗಿ ಔಪಚಾರಿಕ ನೆಲೆಯಲ್ಲಿ ಒಂದನೆ ತರಗತಿಯಿಂದ ಪ್ರಾರಂಭವಾಗಬೇಕು. ಅಂಗ್ಲ ಮಾಧ್ಯಮ ವ್ಯಾಮೋಹದಿಂದ ಮಾತೃಭಾಷೆಯ ಸೃಜನಶೀಲ ಶಕ್ತಿಯನ್ನು ಕುಂಠಿಸುತ್ತಿದೆ. ಇದರಿಂದ ಭವಿಷ್ಯದಲ್ಲಿ ನಾವು ಕವಿಗಳನ್ನು ಸಾಹಿತಿಗಳನ್ನು ಇಲ್ಲವಾಗಿಸುತ್ತಿದ್ದೇವೆ. ಅಧ್ಯಾಪಕ ತರಬೇತಿ ಕೇಂದ್ರಗಳಲ್ಲಿ ಮಾತೃಭಾಷೆಯ ಶಿಕ್ಷಣದ ಮಹತ್ವವನ್ನು ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ಸಮರ್ಥಿಸಲಾಗುತ್ತದೆ. ಆದರೆ ಇದನ್ನು ಕ್ರಿಯಾತ್ಮಕವಾಗಿ ಅಳವಡಿಸುವ ಕನ್ನಡಿಗರ ಸಂಖ್ಯೆ ಕಡಿಮೆ. ಎಲ್ಲರಿಗೂ ಕನ್ನಡ ಶಾಲೆಯಲ್ಲಿ  ಕಾಲೇಜುಗಳಲ್ಲಿ ಉದ್ಯೋಗ ಬೇಕು. ಆದರೆ ತಮ್ಮ ಮಕ್ಕಳು ಆ ಶಾಲೆಗೆ ಬರುವುದಿಲ್ಲ. ಶ್ರೀಸಾಮಾನ್ಯನ ಮಕ್ಕಳಿಗೆ ಮಾತ್ರ ಕನ್ನಡ ಶಾಲೆ ಸೀಮಿತವಾಗಿರುವುದು ಇಂದಿನ ದುರಂತ ಎಂದು ಅವರು ತಿಳಿಸಿದರು.
  ಡಯಟ್ ಹಿರಿಯ ಶಿಕ್ಷಕರಾದ ರಮೇಶ್, ರಾಧಾಕೃಷ್ಣ, ಹಿರಿಯ ಯಕ್ಷಗಾನ ಕಲಾವಿದ ದಿವಾಣ ಶಿವಶಂಕರ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು. ಡಯಟ್ ದ್ವಿತೀಯ ವರ್ಷದ ವಿದ್ಯಾರ್ಥಿ ಚೈತ್ರ ಸ್ವಾಗತಿಸಿ, ವಿನಾಯಕ ವಂದಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ನಿಶ್ಮಿತಾ ಹಾಗೂ ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries