ಮುಳ್ಳೇರಿಯ: ಕೃಷಿ ಅಭಿವೃದ್ಧಿ ಹಾಗೂ ಕೃಷಿಕರ ಕ್ಷೇಮ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಎಟಿಎಂಎ) ಕಾಸರಗೋಡು, ಬೆಳ್ಳೂರು ಕೃಷಿ ಭವನ ನೇತೃತ್ವದಲ್ಲಿ ಕಿನ್ನಿಂಗಾರು ಕೃಷಿ ಭವನದಲ್ಲಿ ಗುರುವಾರ ಗುಂಪು ಸಾಮರ್ಥ್ಯ ವೃದ್ಧಿ ತರಬೇತಿ ಶಿಬಿರ ನಡೆಯಿತು.
ಕೇರಳ ಕೃಷಿ ವಿಜ್ಞಾನ ಇಲಾಖೆ ಕಾಸರಗೋಡು ಇದರ ಸಂಪನ್ಮೂಲ ವ್ಯಕ್ತಿ ಪಾಂಡುರAಗ ಕೆ. ಅಣಬೆ ಕೃಷಿಯ ಬಗ್ಗೆ ತರಗತಿ ನೀಡಿದರು. ಕೃಷಿ ಅಧಿಕಾರಿ ಗಿರೀಶ್ ಬಿ. ಸ್ವಾಗತಿಸಿ, ಕೃಷಿ ಸಹಾಯಕ ಸೇತು ಕೆ.ವಂದಿಸಿದರು.