ಸಮರಸ ಚಿತ್ರ ಸುದ್ದಿ: ಉಪ್ಪಳ: ಕಲಾರತ್ನ ಶಂನಾಡಿಗರು ಹಮ್ಮಿಕೊಂಡು ದ್ವಾದಶ ಹರಿಕೀರ್ತನ ಸೇವಾ ಅಭಿಯಾನದ ಹನ್ನೊಂದನೆಯ ಸೇವಾ ಹರಿಕಥಾ ಸಂಕೀರ್ತನೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರಗಿತು. ಶಂನಾಡಿಗರು ಅಮ್ಮಾ ಗಜಗೌರಿ ಎನ್ನುವ ಹರಿಕೀರ್ತನೆಯನ್ನು ಸೇವಾರೂಪದಲ್ಲಿ ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ಸತ್ಯನಾರಾಯಣ ಐಲ ಹಾಗೂ ಜಗದೀಶ ಉಪ್ಪಳ ಸಹಕರಿಸಿದರು.