ಪೆರ್ಲ: ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಳೆದ ೫ ದಿನಗಳ ಕಾಲ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಶನಿವಾರ ಸಂಪನ್ನವಾಯಿತು.
ಕಿರಿಯ ಪ್ರಾಥಮಿಕ ಜನರಲ್ ವಿಭಾಗದಲ್ಲಿ ಮುಳ್ಳೇರಿಯಾ ವಿದ್ಯಾಶ್ರೀ ಶಿಕ್ಷಣ ಕೇಂದ್ರ ೫೪ ಅಂಕಗಳೊAದಿಗೆ ಪ್ರಥಮ, ಕಾರಡ್ಕ ಜಿವಿಎಚ್‌ಎಸ್‌ಎಸ್ ಮತ್ತು ಬೇಳ ಸೈಂಟ್ ಬಿಎಎಸ್‌ಬಿಎಸ್ ೫೧ ಸಮಾನ ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆಯಿತು.
ಹಿರಿಯ ಪ್ರಾಥಮಿಕ ಜನರಲ್ ವಿಭಾಗದಲ್ಲಿ ಕುಂಬಳೆ ಎಚ್‌ಎಫ್‌ಎಎಸ್‌ಬಿಎಸ್ ೭೬ ಅಂಕ ಗಳಿಸಿ ಪ್ರಥಮ, ಬೇಳ ಸೈಂಟ್ ಬಿಎಎಸ್‌ಬಿಎಸ್ ೬೮ ಅಂಕದೊAದಿಗೆ ದ್ವಿತೀಯ, ಹೈಸ್ಕೂಲು ವಿಭಾಗದಲ್ಲಿ ಕಾರಡ್ಕ ಜಿವಿಎಚ್‌ಎಸ್‌ಎಸ್ ೧೬೯ ಅಂಕಗಳಿಸಿ ಪ್ರಥಮ, ಪೆರಡಾಲ ಎನ್‌ಎಚ್‌ಎಸ್ ೧೩೪ ಅಂಕದೊದಿಗೆ ದ್ವಿತೀಯ, ಹೈಯರ್ ಸೆಕಂಡರಿ ವಿಭಾಗದಲ್ಲಿ ಮುಳ್ಳೇರಿಯ ಜಿವಿಎಚ್‌ಎಸ್‌ಎಸ್ ೧೮೧ ಅಂಕಗಳಿಸಿ ಪ್ರಥಮ, ಕಾಟುಕುಕ್ಕೆ ಎಸ್‌ಎಸ್‌ಎಚ್‌ಎಸ್‌ಎಸ್ ೧೭೮ ಅಂಕದೊAದಿಗೆ ದ್ವಿತೀಯ, ಸಂಸ್ಕೃತ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನೀರ್ಚಾಲು ಪೆರಡಾಲ ಎಂಎಸ್‌ಸಿಎಚ್‌ಎಸ್ ೮೬ಅಂಕಗಳಿಸಿ ಪ್ರಥಮ, ಬೇಳ ಸೈಂಟ್ ಬಿಎಎಸ್‌ಬಿಎಸ್ ೭೫ಅಂಕ ದ್ವಿತೀಯ, ಸಂಸ್ಕೃತ ಹೈಸ್ಕೂಲ್ ವಿಭಾಗದಲ್ಲಿ ನೀರ್ಚಾಲು ಎಂಎಸ್‌ಸಿಎಚ್‌ಎಸ್ ೮೬ಅಂಕಗಳಿಸಿ ಪ್ರಥಮ, ಪೆರಡಾಲ ಎನ್‌ಎಚ್‌ಎಸ್ ೬೯ಅಂಕಗಳಿಸಿ ದ್ವಿತೀಯ, ಕಿರಿಯ ಪ್ರಾಥಮಿಕ ವಿಭಾಗ ಅರಬಿಕ್‌ನಲ್ಲಿ ಪುತ್ತಿಗೆ ಎಜೆಬಿಎಲ್‌ಎಸ್ ೩೭ಅಂಕ ಗಳಿಸಿ ಪ್ರಥಮ, ಶೇಣಿ ಎಸ್‌ಎಸ್‌ಎಯುಪಿಎಸ್ ಮತ್ತು ಜಿಎಚ್‌ಎಸ್‌ಎಸ್ ಬೆಳ್ಳೂರು ತಲಾ ೩೫ ಅಂಕಗಳೊAದಿಗೆ ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪಳ್ಳಂಗೋಡು ಜಿಯುಪಿಎಸ್ ೫೮ಅಂಕ ಗಳಿಸಿ ಪ್ರಥಮ, ಅಡೂರು ಜಿಎಚ್‌ಎಸ್‌ಎಸ್ ೫೨ಅಂಕದೊAದಿಗೆ ದ್ವಿತೀಯ, ಹೈಸ್ಕೂಲ್ ವಿಭಾಗದಲ್ಲಿ ಅಡೂರು ಜಿಎಚ್‌ಎಸ್‌ಎಸ್ ೮೨ ಅಂಕ ಗಳಿಸಿ ಪ್ರಥಮ ಹಾಗೂ ಮೊಗ್ರಾಲ್ ಜಿವಿಎಚ್‌ಎಸ್‌ಎಸ್ ೭೯ ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದವು.