ಕಾಸರಗೋಡು: ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಎಂಬ ಸಂಕಲ್ಪವನ್ನು ಅನ್ವಯಗೊಳಿಸುವುದರ ಅಂಗವಾಗಿ ಕೇರಳ ಶಿಕ್ಷಣ ಸಚಿವರ ವಿಶೇಷ ಆದೇಶದಂತೆ ಶಾಲೆಯ ಸಮೀಪ ಪ್ರದೇಶಗಳಲ್ಲಿ ವಾಸವಿದ್ದು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ವಿದ್ಯಾರ್ಥಿಗಳಿಂದಲೇ ಗೌರವಿಸುವ ಪ್ರತಿಭೆಯೊಂದಿಗೆ ಮಕ್ಕಳ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯುತ್ತಿದೆ.
ಇದರ ಅಂಗವಾಗಿ ಅಣಂಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಖ್ಯಾತ ಯಕ್ಷಗಾನ ಬೊಂಬೆಯಾಟ ಕಲಾವಿದ ಕೆ.ವಿ.ರಮೇಶ್ ಅವರನ್ನು ಅವರ ನಿವಾಸಕ್ಕೆ ತೆರಳಿ ಗೌರವಿಸಿದರು. ಈ ಸಂದರ್ಭದಲ್ಲಿ ಕೆ.ವಿ.ರಮೇಶ್ ಮಾತನಾಡಿ, ಯಕ್ಷಬೊಂಬೆಗಳನ್ನು ಮಕ್ಕಳಂತೆ ಪ್ರೀತಿಸಬೇಕು ಎಂದರು. ಅಧ್ಯಾಪಕರಾದ ಬಿಂದು, ವಸಂತಿ, ಸುಜಿತ್ ಕುಮಾರ್ ಚೇವಾರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಮಾಸ್ ಸಲೀಂ ಸ್ವಾಗತಿಸಿದರು.ಅನೀಶ್ ಆರ್.ಕೆ. ವಂದಿಸಿದರು.