ಕಾಸರಗೋಡು: ಸಂಸದ ರಾಜ್ ಮೋಹನ್ ಉಣ್ಣಿತಾನ್ ಅವರು ಗಾಳಿ ಮಳೆಯಿಂದಾಗಿ ೧೫೦೦ ಕೃಷಿಕರು ಬೆಳೆಸಿದ ೫೦೦೦೦ ಬಾಳೆ ಕೃಷಿ ನಾಶ ಹೊಂದಿದ ಮಾಡಿಕೈ ಪಂಚಾಯತ್‌ನ ಕಿಕನ್ಕೋಟ್, ಪೆನ್ನಿಪಳ್ಳಿ, ಮುಂಡಾಟ್, ಅಲೈ, ಕಕ್ಕಾಟ್ ಮೊದಲಾದ ಸ್ಥಳ ಸಂದರ್ಶಿಸಿ ಕೃಷಿಕರನ್ನು ಭೇಟಿ ಮಾಡಿದರು. ಸ್ಥಳದಿಂದಲೇ ಜಿಲ್ಲಾಧಿಕಾರಿ ಅವರನ್ನು ಫೋನ್ ಮುಖಾಂತರ ಸಂಪರ್ಕಿಸಿ ಪರಿಹಾರಕ್ಕೆ ಸೂಚಿದರು.
ತತ್‌ಕ್ಷಣ ಜಿಲ್ಲಾಧಿಕಾರಿ ಕೃಷಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವರದಿ ಸಂಗ್ರಹಿಸುವ ಭರವಸೆ ನೀಡಿದರು. ಸಂಸತ್ ಅಧಿವೇಶನದಲ್ಲಿ ಪರಿಹಾರ ಮೊತ್ತವನ್ನು ಹೆಚ್ಚು ಮಾಡಲು ಯತ್ನಿಸುತ್ತೇನೆ ಎಂದು ಹೇಳಿದರು. ನೀರು ತುಂಬಿದ ಸ್ಥಳಕ್ಕೆ ದೋಣಿ ಮೂಲಕ ತಲುಪಿದ ಸಂಸದರ ಜೊತೆ ಡಿ.ಸಿ.ಸಿ. ಕಾರ್ಯದರ್ಶಿ ಪಿ.ವಿ. ಸುರೇಶ್, ಬ್ಲಾಕ್ ಅಧ್ಯಕ್ಷ ಡಿ.ವಿ.ಬಾಲಕೃಷ್ಣ, ನೋಯೆಲ್ ಟಾಮ್, ಮೊÊದೀನ್ ಕುಂಞÂ ಮೊದಲಾದವರಿದ್ದರು.