ಮಂಜೇಶ್ವರ: ಮಂಜೇಶ್ವರ ತಾಲೂಕಿನ ವರ್ಕಾಡಿ ಬಳಿಯ ಪಾವೂರು ಗಡಿ ಪ್ರದೇಶದ ಕೊಂಡೆವೂರು ಎಂಬಲ್ಲಿ ಧರಾಶಾಯಿಯಾದ ದೇವಸ್ಥಾನ ಹಾಗೂ ನಾಗ ವಿಗ್ರಹವೊಂದರ ಕುರುಹುಗಳು ಪತ್ತೆಯಾಗಿವೆ.
ಸುಮಾರು ಐನ್ನೂರಕ್ಕಿಂತಲೂ ಹೆಚ್ಚು ವರ್ಷಗಳ ಹಳಮೆ ಇದೆ ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ನ. ೪ ರಿಂದ ಇಲ್ಲಿ ಉಪ್ಪಳದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ಆರಂಭಿಸಲಾಗಿದೆ.
ಇಲ್ಲಿಯ ಪರಿಸರದ ನಾಗರಿಕರ ಕಣ್ಣಿಗೆ ಇಷ್ಟು ಕಾಲದಿಂದಲೂ ಗೋಚರಿಸದ ನಾಗನ ಕಲ್ಲೊ೦ದು ಪ್ರಶ್ನೆ ಚಿಂತನೆ ಆರಂಭಗೊAಡ ಪ್ರಥಮ ದಿನದಂದೇ ಪಕ್ಕದ ಹೊಳೆಯೊಂದರ ಬದಿ ಗೋಚರಿಸಿದ್ದು, ವಿಚಿತ್ರ ಎನಿಸಿ ದೈವ ಕಾರ್ಣಿಕ ಜನರ ಭಕ್ತಿ ಪರವಶತೆಗೆ ಕಾರಣವಾಗಿದೆ. ಹೊಳೆಯ ಬದಿಯಲ್ಲಿ ನೀರು ರಭಸದಿಂದ ಹರಿದು ಹೋಗುತ್ತಿದ್ದರೂ ಪತ್ತೆಯಾಗಿರುವ ಪ್ರಾಚೀನ ನಾಗ ಕಲ್ಲು ಗೋಚರಿಸದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ದೈವಜ್ಞರ ಸೂಚನೆಯಂತೆ ಕಾಪು ಬಾಳಿಕೆ ಪದ್ಮನಾಭ ಅಡ್ಯಂತಾಯರು ಆ ಕಲ್ಲನ್ನು ನೀರಿನಿಂದ ಹೊರ ತೆಗೆದಿದ್ದು, ಪ್ರಾಚೀನತೆಯ ಚಿಂತನೆ-ಅಧ್ಯಯನ ನಡೆಸಲಿದ್ದಾರೆ. ದೇವರ ಸಾನ್ನಿಧ್ಯ ಇನ್ನಷ್ಟೆ ತಿಳಿದುಬರಬೇಕಿದೆ. ಊರ ಪರ ಪೂರ ಆಸ್ಥಿಕರ ಸಹಕಾರದೊಂದಿಗೆ ಮುಂದಿನ ಕಾರ್ಯಗಳು ನಡೆಸಲು ಉದ್ದೇಶಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.