ಮಂಜೇಶ್ವರ: ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್(ಸವಾಕ್) ಇದರ ಮಂಜೇಶ್ವರ ವಲಯ ಸಮಾವೇಶ ನಾಳೆ(ನ.17) ಭಾನುವಾರ ಅಪರಾಹ್ನ 2.30 ರಿಂದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಸಮೀಪದ ಕಲಾಸ್ಪರ್ಶಂ ಅಡಿಟೋರಿಯಂ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಮಾವೇಶದಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ, ನೂತನ ಪದಾಧಿಕಾರಿಗಳ ಆಯ್ಕೆ, ಹೊಸ ಸದಸ್ಯರ ಸೇರ್ಪಡೆ, ಕಲಾವಿದರ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಕೆ ಹಾಗೂ ಕುಂಬಳೆಯ ಡ್ಯಾನ್ಸ್ ಆಂಡ್ ಬೀಟ್ಸ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ. ಸಂಜೆ 5.30 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕಲಾಸ್ಪರ್ಶಂನ ನಿರ್ದೇಶಕಿ ಜೀನ್ ಲವೀನಾ ಮೊಂತೇರೋ ಉದ್ಘಾಟಿಸುವರು. ಚಲನಚಿತ್ರ ನಟ ಪ್ರಕಾಶ್ ಕೆ.ತೂಮಿನಾಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ಆರ್.ಜಯಾನಂದ, ಸಾಮಾಜಿಕ ಕಾರ್ಯಕರ್ತ ಹರಿಶ್ಚಂದ್ರ ಮಂಜೇಶ್ವರ ಅತಿಥಿಗಳಾಗಿ ಉಪಸ್ಥಿತರಿರುವರು. ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್, ಸಾಮಾಜಿಕ ಕಾರ್ಯಕರ್ತೆ ವಿಮಲ ನಾರಾಯಣ, ರಂಗನಟ ದಯಾನಂದ ಮಾಡ, ರಂಗ ನಿರ್ದೇಶಕ ಉದಯ ಸಾರಂಗ್, ರಂಗನಟ ಭಾಸ್ಕರ ಮಂಜೇಶ್ವರ ಉಪಸ್ಥಿತರಿರುವರು.
ಬಳಿಕ ಕಾಸರಗೋಡಿನ ರಂಗ ಕುಟೀರ ನೇತೃತ್ವದಲ್ಲಿ ಎನ್.ವಿ.ರಾವ್ ಕಾದಂಬರಿ ಆಧಾರಿತ ಸತ್ಯನಾಪುರತ ಸಿರಿ ತುಳು ನಾಟಕ ಕೃಷ್ಣಮೂರ್ತಿ ಕವತ್ತಾರ್ ಅವರ ನಿರ್ದೇಶನದಲ್ಲಿ ಪೂರ್ಣಿಮಾ ಸುರೇಶ್ ಏಕ ವ್ಯಕ್ತಿ ರೂಪದಲ್ಲಿ ಪ್ರದರ್ಶನ ನೀಡುವರು.