ಪೆರ್ಲ ಶ್ರೀಶಂಕರ ವೇದಪಾಠ ಶಾಲೆ ವಾರ್ಷಿಕೋತ್ಸವ
ಪೆರ್ಲ:ವೇದ, ಮಂತ್ರಗಳ ಅರ್ಥ ತಿಳಿಯದೇ ಹೋದರೂ ನಿತ್ಯ ಮಂತ್ರ ಪಠನವು ಅದರೊಳಗಿನ ಅಂತರಾರ್ಥದ ಪ್ರಭಾವದಿಂದ ಭಗವಂತ ಒಲಿಯುವನು ಎಂದು ಶ್ರೀ ರಾಮಚಂದ್ರಾಪುರ ಮಠದ ವೈದಿಕ ಸಂಚಾಲಕ ವೇದಮೂರ್ತಿ ಕೂಟೇಲು ಕೇಶವ ಪ್ರಸಾದ ಶರ್ಮ ತಿಳಿಸಿದರು.
ಪೆರ್ಲ ಶ್ರೀ ಶಂಕರ ಸದನ ಶ್ರೀ ಶಂಕರ ವೇದಪಾಠ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದ ಮಂತ್ರಗಳ ಪಾರಾಯಣದಿಂದ ಅದೆಷ್ಟೋ ಖಾಯಿಲೆಗಳು ವಾಸಿಯಾದ ನಿದರ್ಶನಗಳಿವೆ ಎಂದ ಅವರು ಪರಿಚಿತ ವ್ಯಕ್ತಿಗಳ ಅನಾರೋಗ್ಯ ಸಮಸ್ಯೆ ಶ್ರದ್ಧೆ ಹಾಗೂ ಭಕ್ತಿಯ ಮಂತ್ರ ಪಠಣದಿಂದ ಹೇಳ ಹೆಸರಿಲ್ಲದೆ ದೂರವಾಗಿರುವುದನ್ನು ಪುಷ್ಟೀಕರಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಂತ್ರ ಪಠಣದ ಮಹತ್ವ ವಿವರಿಸಿ ಮಾತನಾಡಿ, ಪ್ರತಿಯೊಂದು ಅಕ್ಷರಕ್ಕೂ ವಿಶೇಷವಾದ ಅರ್ಥವಿದೆ. ತಪ್ಪುಗಳಿಲ್ಲದ ಮಂತ್ರ ಪಠಿನದಿಂದ ಪಠಿಸುವ ವ್ಯಕ್ತಿ ಹಾಗೂ ಕೇಳಿಸಿಕೊಂಡವರಲ್ಲೂ ಧನಾತ್ಮಕ ಬೆಳವಣಿಗೆ ಕಂಡು ಬರುವುದು ಎಂದರು.
ಸಮಾರಂಭದಲ್ಲಿ ವೈದಿಕ ವಿದ್ವಾಂಸರನ್ನು ಗೌರವಿಸಲಾಯಿತು. ಹಿರಿಯ ವೈದಿಕ ವಿಧ್ವಾಂಸ ವೇದಮೂರ್ತಿ ಬೆಂಗ್ರೋಡಿ ಮಾಧವ ಭಟ್ ದಂಪತಿಗಳನ್ನು ವಿಘ್ನೇಶ್ ಭಟ್ ದೈತೋಟ(ಬಾಯಾರು) ಹಾಗೂ ವೇದಗುರು ಸಜಂಗದ್ದೆ ಶ್ರೀಧರ ಭಟ್ ದಂಪತಿಗಳನ್ನು ಶ್ರೀ ಶಂಕರ ವೇದ ತರಗತಿ ಶಿಷ್ಯ ವೃಂದದವರು ಗುರುವಂದನೆ ಸಲ್ಲಿಸಿದರು.
ಅಗಲ್ಪಾಡಿ ಶ್ರೀ ವೇದಮಾತಾ ಟ್ರಸ್ಟ್ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಟ್ರಸ್ಟ್ ವಿಶೇಷ ಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯ ಚಟುವಟಿಕೆ ವಿವರಿಸಿದರು. ಚೇರ್ಕೂಡ್ಲು ಗಣೇಶ್, ವಿಷ್ಣುಭಟ್ ಅಜಕ್ಕಳಮೂಲೆ, ಬಾಲಚಂದ್ರ ಭಟ್ ಸಜಂಗದ್ದೆ ವೇದ ತರಗತಿಯ ತಮ್ಮ ಅನುಭವ ತಿಳಿಸಿದರು.
ಹಿರಿಯ ವೈದಿಕ ವಿದ್ವಾಂಸ ಕೂಟೇಲು ತಿರುಮಲೇಶ್ವರ ಶಾಸ್ತ್ರಿ, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ದೇವಳದ ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್, ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷ ಚೋಕೆಮೂಲೆ ಶ್ರೀಧರ ಭಟ್ ಉಪಸ್ಥಿತರಿದ್ದರು. ರಾಜಾರಾಂ ಪೆರ್ಲ ಸ್ವಾಗತಿಸಿ, ಗಿರೀಶ್ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ನಿರ್ವಹಿಸಿದರು.