ಕಾಸರಗೋಡು: ರಾಷ್ಟ್ರೀಯ ಏಕತಾ ದಿನಾಚರಣೆ ಮತ್ತು ವಿಜಿಲೆನ್ಸ್ ದಿನಾಚರಣೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜರಗಿತು. ನೆಹರೂ ಯುವಕೇಂದ್ರ ಮತ್ತು ಕಾಲೇಜಿನ ಎನ್.ಎಸ್.ಎಸ್. ಯೂನಿಟ್ ವತಿಯಿಂದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ವಾರ್ಷಿಕ ದಿನಾಚರಣೆ ಅಂಗವಾಗಿ ಈ ಸಮಾರಂಭ ನಡೆಯಿತು. ಕಾರ್ಯಕ್ರಮ ಅಂಗವಾಗಿ ಸಾಮೂಹಿಕ ಓಟ ಮತ್ತು ಜಾಗೃತಿ ಸಭೆ ಜರಗಿತು.
ನೆಹರೂ ಯುವ ಕೇಂದ್ರ ಜಿಲ್ಲಾ ಸಂಚಾಲಕಿ ಜೆಸಿಂತಾ ಡಿ'ಸೋಜಾ ಉದ್ಘಾಟಿಸಿದರು. ಕಾಲೇಜು ಪ್ರಾಂಶಪಾಲ ಡಾ.ಅನಂತ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಎಂ.ಬಾಲಕೃಷ್ಣ ತರಗತಿ ನಡೆಸಿದರು. ವಿಜಿಲೆನ್ಸ್ ಸಪ್ತಾಹ ಎಂಬ ವಿಷಯದಲ್ಲಿ ಸಿ.ಐ.ಉಣ್ಣಿಕೃಷ್ಣನ್ ಉಪನ್ಯಾಸ ನೀಡಿದರು. ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್, ನೆಹರೂ ಯುವ ಕೇಂದ್ರ ಸುರಕ್ಷಾ ಪ್ರಬಂಧಕ ಶ್ರೀಜಿತ್, ಕಾಲೇಜು ಯೂನಿಯನ್ ಅಧ್ಯಕ್ಷ ಆದರ್ಶ್ ಚಂದ್ರನ್ ಉಪಸ್ಥಿತರಿದ್ದರು. ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿ ಆಸಿಫ್ ಇಕ್ಬಾಲ್ ಸ್ವಾಗತಿಸಿ, ನೆಹರೂ ಯುವ ಕೇಂದ್ರ ಬ್ಲಾಕ್ ಸ್ವಯಂಸೇವಕ ಮಹಮ್ಮದ್ ಸಾಹದ್ ವಂದಿಸಿದರು.