HEALTH TIPS

ಚಿನ್ಮಯ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ಹುಟ್ಟೂರ ಭವ್ಯ ಸ್ವಾಗತ- ಕಲಿಯಲಿರುವ ಕೌಶಲ್ಯತೆಯನ್ನು ಕಲಿಯಬೇಕು : ಡಾ. ನಾಗರಾಜ ನೀರ್ಚಾಲು


       ಬದಿಯಡ್ಕ: ವಿದ್ಯಾರ್ಥಿಗಳು ಕೇವಲ ತುಂಬಿಸಿದ ಪಾತ್ರೆಗಳಾಗುವ ಬದಲು ಬೆಳಗುವ ದೀಪವಾಗಿ ಜ್ಯೋತಿಯನ್ನು ಬೀರಬೇಕು. ಕಲಿಯಲಿರುವ ಕೌಶಲ್ಯತೆಯನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಚಿನ್ಮಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಾಗರಾಜ ನೀರ್ಚಾಲು ಹೇಳಿದರು.
      ಶನಿವಾರ ಬದಿಯಡ್ಕ ಚಿನ್ಮಯ ವಿದ್ಯಾಲಯದ ವತಿಯಿಂದ ಹುಟ್ಟೂರ ಗೌರವಾರ್ಪಣೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
    ಉತ್ತಮವಾದ ಮಾರ್ಗದರ್ಶನವನ್ನು ನೀಡುವವನು ಗುರು. ಡೂ ಯುವರ್ ಬೆಸ್ಟ್, ಲೀವ್ ದ ರೆಸ್ಟ್ ಎಂಬ ಮಾತನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಎತ್ತರಕ್ಕೇರಲು ಸಾಧ್ಯವಿದೆ. ಪಾಠ್ಯೇತರ ಚಟುವಟಿಕೆಗಳಿಗೂ ಚಿನ್ಮಯ ವಿದ್ಯಾಲಯ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದು ಅವರು ತಿಳಿಸಿದರು.
      ಚಿನ್ಮಯ ವಿದ್ಯಾಲಯದ ಅಧ್ಯಕ್ಷರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಆಶೀರ್ವಚನವನ್ನು ನೀಡಿ ಮಾತನಾಡಿ, ಕಾಸರಗೋಡಿನ ಮಣ್ಣಿನ ಮಗ ಇಂದು ಚಿನ್ಮಯ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಬೆಳೆದಿದ್ದಾರೆ. 38 ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿದ ಇವರು ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಮಹಾನ್ ವ್ಯಕ್ತಿಯಾಗಿ, ಆದರ್ಶಪ್ರಾಯರಾಗಿದ್ದಾರೆ. ಭಾರತೀಯ ಸಂಸ್ಕøತಿ, ವೇದ, ಪುರಾಣ, ಸಂಪ್ರದಾಯ, ಪಾರಂಪರ್ಯಗಳಿಗೆ ಪೂರಕವಾಗಿ ಆಧುನಿಕ ವಿದ್ಯಾಭ್ಯಾಸವನ್ನು ಚಿನ್ಮಯ ವಿದ್ಯಾಲಯವು ನೀಡುತ್ತಿದೆ. ಇಂತಹ ಚಿನ್ಮಯ ವಿಶ್ವವಿದ್ಯಾಲಯವನ್ನು ಮುನ್ನಡೆಸುತ್ತಿರುವುದು ನಮ್ಮೂರಿನ ಮಣ್ಣಿನ ಮಗ ಡಾ. ನಾಗರಾಜರು ಎಂದು ಹೇಳಲು ನಮಗೆ ಹೆಮ್ಮೆಯೆನಿಸುತ್ತದೆ ಎಂದರು.
     ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಡಾ.ನಾಗರಾಜರೊಂದಿಗಿನ ತಮ್ಮ ಬಾಲ್ಯಕಾಲದ ನೆನಪನ್ನು ಬಿಚ್ಚಿಟ್ಟರು. ಇವರ ಮುಂದಾಳುತ್ವದಲ್ಲಿ ವಿಶ್ವವಿದ್ಯಾಲಯವು ಜಗತ್ಪ್ರಸಿದ್ಧವಾಗಲಿ ಎಂದು ಅವರು ತಿಳಿಸಿದರು. ಬದಿಯಡ್ಕ ಚಿನ್ಮಯ ಮಿಶನ್‍ನ ಉಪಾಧ್ಯಕ್ಷ ಪಿಲಿಂಗಲ್ಲು ಕೃಷ್ಣಭಟ್, ವಿದ್ಯಾಲಯ ಕಾರ್ಯದರ್ಶಿ ಜ್ಞಾನದೇವ ಶೆಣೈ ಬದಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರಶಾಂತ್ ಬೆಳಿಂಜ ಸ್ವಾಗತಿಸಿ, ವಿದ್ಯಾರ್ಥಿನಿ ಕ್ಷಮಾ ಭಟ್ ವಂದಿಸಿದರು. ಅಧ್ಯಾಪಕ ಸಿಬಿನ್ ವರ್ಗೀಸ್ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮೊದಲು ಡಾ. ನಾಗರಾಜ್ ನೀರ್ಚಾಲು ಅವರನ್ನು ಕೇರಳೀಯ ಶೈಲಿಯಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ನಂತರ ವೇದಿಕೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಮೈಸೂರು ಪೇಟ ಹಾಗೂ ಶಾಲು ಹೊದೆಸಿ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಸನ್ಮಾನಿಸಿದರು.
           ಡಾ. ನಾಗರಾಜರ ಬಗ್ಗೆ :
    ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲಿನವರು. 1ನೇ ತರಗತಿಯಿಂದ 9ನೇ ತರಗತಿಯ ತನಕ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಕಲಿತ ಅವರು ಬಳ್ಳಾರಿ, ಉಜಿರೆ, ಕೊಲ್ಕತ್ತಾ ಮೊದಲಾದೆಡೆಗಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. 1982ರಿಂದ ಅಮೇರಿಕದಲ್ಲಿ ಕುಟುಂಬ ಸಮೇತ ನೆಲೆಸಿರುವ ಅವರು ಕೇರಳದ ಚಿನ್ಮಯ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries