HEALTH TIPS

ಸಮಗ್ರ ವರದಿ-ಅಯೋಧ್ಯೆಯಲ್ಲಿ ರಾಮಮಂದಿರ: ಹಿಂದೂಗಳಿಗೆ ಭೂಮಿ ಹಕ್ಕು ನೀಡಿ, ಮುಸ್ಲಿಮರಿಗೆ ಬದಲಿ ಜಾಗ ನೀಡುವಂತೆ 'ಸುಪ್ರೀಂ' ಆದೇಶ


      ನವದೆಹಲಿ: ಇಡೀ ಭಾರತ ಎದುರು ನೋಡುತ್ತಿದ್ದ ಅಯೋಧ್ಯೆ ವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂಕೋರ್ಟ್, ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ ಪ್ರದೇಶದಲ್ಲಿ ಮಂದಿರ ನಿರ್ಮಾಣಕ್ಕೆ ಸರ್ವೋಚ್ಛ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ.
    ಎಲ್ಲಾ ಧರ್ಮವನ್ನೂ ಗೌರವಿಸುವುದಾಗಿ ಹೇಳಿರುವ ಸುಪ್ರೀಂಕೋರ್ಟ್'ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿAದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜೊತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಆದೇಶಿಸಿದೆ. ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಕೂಡ ಆದೇಶಿಸಿದ್ದು, ಈ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.  ರಾಮಜನ್ಮಭೂಮಿ ಪ್ರಕರಣದ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿದರು. ನ್ಯಾಯಾಲಯದ ದೇಶದ ಸಮತೋಲನವನ್ನು ಕಾಪಾಡಬೇಕು. ಬಾಬರ್ ಆದೇಶದ ಮೇಲೆ ಮಸೀದಿಯನ್ನು ನಿರ್ಮಾಣ ಮಾಡಲಾಗಿತ್ತು. ೧೯೪೯ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರುವುದು ಜಾತ್ಯಾತೀತ ತತ್ವದಡಿಯಲ್ಲಿ. ಜಾತ್ಯಾತೀತತೆ ಉಳಿಸುವುದು ಸಂವಿಧಾನದ ಮೂಲ ಆಶಯವಾಗಿದೆ ಎಂದು ಹೇಳಿದರು. ಜೊತೆಗೆ ನಿರ್ಮೋಹಿ ಅಖಾಡ ಮತ್ತು ಶಿಯಾ ವಕ್ಫ್ ಮಂಡಳಿ ಸಲ್ಲಿಸಿದ್ದ ಹಕ್ಕುದಾರಿಗೆ ಅರ್ಜಿಯನ್ನೂ ವಜಾಗೊಳಿಸಿದರು.  ಬಳಿಕ ತೀರ್ಪು ಓದರು ಆರಂಭಿಸಿದ ನ್ಯಾಯಮೂರ್ತಿಗಳು, ಸಂಪೂರ್ಣ ತೀರ್ಪು ಓದಲು ೩೦ ನಿಮಿಷ ಕಾಲಾವಕಾಶ ಬೇಕು ಎಂದು ತಿಳಿಸಿದರು. ಎಲ್ಲಾ ಧರ್ಮಗಳ ನಂಬಿಕೆಯನ್ನೂ ನ್ಯಾಯಾಲಯ ಗೌರವಿಸುತ್ತದೆ, ಯಾರ ನಂಬಿಕೆಗಳಿಗೂ ಧಕ್ಕೆಯುಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಸೀದಿಯಲ್ಲಿ ನಮಾಜ್ ಮಾಡುವ ನಂಬಿಕೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ನ್ಯಾಯಾಲಯ ನಂಬಿಕೆ ಮತ್ತು ಸಾಕ್ಷಿ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತದೆ. ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು. ಬಾಬರ್ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬುದು ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ. ೧೯೪೯ರಲ್ಲಿ ರಾಮನ ಮೂರ್ತಿ ಪ್ರತಿಷ್ಟಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರೋದು ಜಾತ್ಯಾತೀತದಡಿ ಸ್ಥಾಪನೆ ಜ್ಯಾತ್ಯಾತೀತತೆ ಉಳಿಸುವುದು ಸಂವಿಧಾನದ ಮೂಲ ಆಶಯ. ರಾಮಜನ್ಮ ಭೂಮಿ ನ್ಯಾಯಶಾಸ್ತ್ರವಾಗಿ ಇಲ್ಲ. ಹಾಗೆಯೇ ಬಾಬ್ರಿ ಮಸೀದಿಯೂ ಖಾಲಿ ಜಾಗದಲ್ಲಿ ನಿರ್ಮಾಣವಾಗಿರಲಿಲ್ಲ. ಅಲ್ಲಿ ಈ ಹಿಂದೆಯೇ ಯಾವುದೋ ಕಟ್ಟಡವಿತ್ತು ಎನ್ನುವುದಕ್ಕೆ ಸಾಕ್ಷಿಗಳಿವೆ. ಅಲ್ಲಿದ್ದ ಕಟ್ಟಡ ಮುಸ್ಲಿಮೇತರ ಕಟ್ಟ ಎಂಬುದನ್ನು ಪುರಾತತ್ವ ಇಲಾಖೆ ಸ್ಪಷ್ಟರಪಡಿಸಿದೆ. ೧೨ನೇ ಶತಮಾನದ ಕಡ್ಡ ಆಗಿದ್ದರೂ ಅದು ದೇಗುಲವೆಂದು ಸ್ಪಷ್ಟಪಡಿಸಿಲ್ಲ. ಹಿಂದೂಗಳ ಪ್ರಕಾರ ಆ ಪ್ರದೇಶ ರಾಮನ ಜನ್ಮಭೂಮಿ. ಶ್ರೀರಾಮ ಇಲ್ಲೇ ಹುಟ್ಟಿದ್ದು ಎಂಬ ನಂಬಿಕೆ ಹಿಂದೂಗಳದ್ದು, ಹಿಂದೂಗಳ ನಂಬಿಕೆಯನ್ನೂ ನಾವು ತೆಗೆದು ಹಾಕಲು ಸಾಧ್ಯವಿಲ್ಲ.
    ಕಟ್ಟಡದ ಮಧ್ಯಭಾಗದಲ್ಲಿ ಶ್ರೀರಾಮ ಹುಟ್ಟಿದ್ದು ಎನ್ನುವುದು ವಾದ. ನಂಬಿಕೆ ಖಚಿತವಾದಾಗ ಮಧ್ಯಪ್ರವೇಶ ಸರಿಯಲ್ಲ. ನಂಬಿಕೆಗಳನ್ನು ನ್ಯಾಯಾಲಯ ಒಪ್ಪಬೇಕಾಗುತ್ತದೆ. ಹಿಂದೂಗಳ ಪ್ರಕಾರ ಇದು ಶ್ರೀರಾಮನ ಜನ್ಮಭೂಮಿ. ಮುಸ್ಲಿಮರ ಪ್ರಕಾರ ಇದು ಐತಿಹಾಸಿಕ ಮಸೀದಿ ಕಟ್ಟಡ. ಯಾರ ನಂಬಿಕೆಗಳನ್ನೂ ನ್ಯಾಯಾಲಯ ಪ್ರಶ್ನೆ ಮಾಡುವುದಿಲ್ಲ. ಕೇವಲ ನಂಬಿಕೆಯ ಆಧಾರದ ಮೇಲೆ ಭೂಹಕ್ಕು ಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ, ಸುನ್ನಿ, ರಾಮಲಲ್ಲಾ ವಾದವನ್ನು ಪರಿಗಣಿಸಬಹುದು ಎಂದಿರುವ ಸಾಂವಿಧಾನಿಕ ಪೀಠ, ಶಿಯಾ ನಿರ್ಮೋಹಿ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ವಿವಾದಿತ ಭೂಮಿಯಲ್ಲಿ ಮುಸ್ಲಿಮರ ಸಂಪೂರ್ಣ ಹಕ್ಕು ಕಳೆದುಕೊಂಡಿಲ್ಲ. ಇದಕ್ಕೆ ಬೇಕಾದ ಯಾವುದೇ ಸೂಕ್ತ ಸಾಕ್ಷಿಗಳಿಲ್ಲ. ೧೮೫೬-೧೮೫೭ರ್ ಅವಧಿಯಲ್ಲಿ ನಮಾಜ್ ನಡೆಯುತ್ತಿದ್ದು. ವಿವಾದಿತ ಜಾಗ ಸರ್ಕಾರದ ವಶ ಆಗುವವರೆಗೂ ಪ್ರಾರ್ಥನೆ, ಪ್ರಾರ್ಥನೆ ಮಾಡಿದ ಕೂಡಲೇ ಹಕ್ಕು ಸ್ಥಾಪನೆ ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಹಿಂದೂಗಳೂ ಪೂಜೆ ಸಲ್ಲಿಸುತ್ತಿದ್ದರು. ಮುಸ್ಲಿಮರು ಅವರಾಶ ಇಲ್ಲಿದಿದ್ದರೂ ಪ್ರಾರ್ಥನೆ ಸಲ್ಲಿಸಿದ್ದರು. ಇದು ಸೌಹಾರ್ದತೆಯಿಂದ ನಡೆಯುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದೆ.
     ಆರಾಧನಾ ಸ್ಥಲಗಳ ಕುರಿತ ಕಾಯ್ದೆಯಲ್ಲಿ ದೇಶದ ಎಲ್ಲಾ ಧಾರ್ಮಿಕ ಸಮುದಾಯಗಳ ಹಿತಾಸಕ್ತಿ ಕಾಪಾಡುವ ಭಾರತದ ನಿಷ್ಠೆ ಸ್ಪಷ್ಟವಾಗಿದೆ. ಮಸೀದಿಯೊಂದರ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪ್ರತ್ಯೇತ ಜಮೀನು ನೀಡಿ, ವಿವಾದಿತ ಜಮೀನಿನಲ್ಲಿ ದೇಗುನ ನಿರ್ಮಾಣ ಮಾಡಿ. ಮಂದಿರ ನಿರ್ಮಾಣಕ್ಕೆ ೩ ತಿಂಗಳುಗಳಲ್ಲಿ ಯೋಜನೆಯೊಂದನ್ನು ರಚಿಸಿ ಎಂದು ಇದೇ ವೇಳೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries