ಮುಂಬೈ: ದೇಶದ ವೇತನದಾರರ ಹಿತ ಕಾಪಾಡಲು ರಾಷ್ಟ್ರದಾದ್ಯಂತ 'ಒಂದು ರಾಷ್ಟ್ರ, ಒಂದು ವೇತನದ ದಿನ'ಹೊಸ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.
ಕೇಂದ್ರ ಸಹಕಾರದ ಖಾಸಗಿ ಭದ್ರತಾ ಉದ್ಯಮ (ಸಿಎಪಿಎಮಂ) ಆಯೋಜಿಸಿದ್ದ ಭದ್ರತಾ ನಾಯಕತ್ವ ಶೃಂಗ ೨೦೧೯ ರ ಕಾರ್ಯಕ್ರಮದಲ್ಲಿ ಅವರು ಶನಿವಾರ ಈ ಬಗ್ಗೆ ಮಾತನಾಡಿದರು. ಕೇಂದ್ರ ಸರ್ಕಾರ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ ಮತ್ತು ವೇತನ ಸಂಹಿತೆ ಜಾರಿಗಾಗಿ ಕಾರ್ಯಪ್ರವೃತ್ತವಾಗಿದೆ. ವೇತನ ಸಂಹಿತೆಯನ್ನು ಸಂಸತ್ ಈಗಾಗಲೇ ಅಂಗೀಕರಿಸಿದೆ. ಇದರ ಅನುಷ್ಠಾನಕ್ಕಾಗಿ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದರು.