ಕಾಸರಗೋಡು: ವಾಳಯಾರಿನಲ್ಲಿ ಬಾಲಕಿಯರ ಮೇಲೆ ನಡೆದ ದೌರ್ಜನ್ಯವನ್ನು ಬುಡಮೇಲುಗೊಳಿಸಿದ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಯುವ ಮೋರ್ಚಾ ಕಾರ್ಯಕರ್ತರು ಕಾಸರಗೋಡು ಸಿ.ಐ. ಕಚೇರಿಗೆ ಪಂಜಿನ ಮೆರವಣಿಗೆ ನಡೆಸಿದರು.
ಪಂಜಿನ ಮೆರವಣಿಗೆಯನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿ ಮಾತನಾಡಿದರು. ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜೇಶ್ ಕೈಂದಾರ್ ಅಧ್ಯಕ್ಷತೆ ವಹಿಸಿದ್ದರು. ಸುಮಿತ್ ರಾಜ್ ಪೆರ್ಲ, ದಿಲೀಪ್ ಪಳ್ಳಂಜಿ ಮೊದಲಾದವರು ಮಾತನಾಡಿದರು.