ವಾಷಿಂಗ್ ಟನ್: ಇಸೀಸ್ ಉಗ್ರ ಸಂಘಟನೆಯ ನಾಯಕ ಅಬು ಬಕರ್-ಅಲ್-ಬಾಗ್ದಾದಿಯನ್ನು ಹತ್ಯೆ ಮಾಡುವಲ್ಲಿ ಸಹಕರಿಸಿದ್ದ ಅಮೆರಿಕ ಸೇನಾ ಶ್ವಾನ ಕ್ಯಾನನ್ ಗೆ ಶ್ವೇತ ಭವನದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.
ಈ ಕಾರ್ಯಕ್ರಮದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೇನಾ ಶ್ವಾನ ಕ್ಯಾನನ್ ಧೈರ್ಯಶಾಲಿ ಶ್ವಾನವಾಗಿದೆ. ಕಾರ್ಯಾಚರಣೆ ವೇಳೆ ಉಂಟಾದ ಗಾಯಗಳಿಂದ ಬೇಗ ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ. ಮಧ್ಯಪ್ರಾಚ್ಯದಿಂದ ವಾಷಿಂಗ್ ಟನ್ ಗೆ ಆಗಮಿಸಿರುವ ಶ್ವಾನಕ್ಕೆ ಪದಕ ಮತ್ತು ಫಲಕ ನೀಡಲಾಗಿದೆ ಎಂದಿರುವ ಟ್ರಂಪ್, ಪತ್ರಕರ್ತರು ಬಾಯಿ ಬಿಟ್ಟರೆ ಈ ಶ್ವಾನ ದಾಳಿ ಮಾಡುತ್ತದೆ. ಅಂತಹ ತರಬೆತಿಯನ್ನೂ ಇದಕ್ಕೆ ನೀಡಲಾಗಿದೆ, ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.