ಕಾಸರಗೋಡು 28 ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವ ವೇಳೆ ನಡೆಯುವ ಸ್ಪರ್ಧೆಗಳಲ್ಲಿ ಭಾಗಿಗಳಾಗಲು ಬರುತ್ತಿರುವ ವಿದ್ಯಾರ್ಥಿಗಳಿಗೆ, ಅವರ ಶಿಕ್ಷಕರಿಗೆ ಮತ್ತು ಪೆÇೀಷಕರಿಗೆ ಗಡಿನಾಡು ಕಾಸರಗೋಡು ಅನೇಕ ಆಕರ್ಷಣೆಗಳ ತಾಣವಾಗುತ್ತಿದೆ. ಇದರಲ್ಲಿ ಪ್ರಧಾನವಾಗಿ ಇಲ್ಲಿನ ವಿವಿಧ ಸಂಸ್ಕøತಿ ಮತ್ತು ಅದರ ಅಂಗವಾಗಿ ನಡೆಯುತ್ತಿರುವ ಆಚರಣೆಗಳು ಪ್ರಧಾನ ಅಂಶವಾಗಿವೆ. ಇದರ ದ್ಯೋತಕವಾಗಿ ಇಲ್ಲಿಆರಾzsನೆಗೆ ಪ್ರತೀಕಗಳಾಗಿ ನೆಲೆನಿಂತಿರುವ ದೈವಗಳೂ ಪ್ರಾಧಾನ್ಯವನ್ನು ಪಡೆಯುತ್ತಿದ್ದು, ಈ ದೈವಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಶ್ವಾಸ, ಭಕ್ತಿ, ಪರಿಸರ ಸಂರಕ್ಷಣೆ, ಕೃಷಿಗೆ ಪ್ರಾಧಾನ್ಯ, ಬದುಕಿನ ಶಿಸ್ತು, ಸಾಮಾಜಿಕ ಏಕತೆ...ಹೀಗೆ ಬೇರೆಬೇರೆ ಸಂದೇಶಗಳಿಗೆ ನಿದರ್ಶನಗಳಾಗಿ ಜಿಲ್ಲೆಯಲ್ಲಿ ವಿವಿಧ ದೈವಗಳು ಇಲ್ಲಿ ಅಸ್ತಿತ್ವವನ್ನು ಹೊಂದಿವೆ. ಈ ದೈವಕೋಲಗಳ ಹಿನ್ನೆಲೆಯಿಂದಲೇ ನಮ್ಮ ಮಣ್ಣಿನ ಇತಿಹಾಸದ ಜ್ಞಾಪಕ ಒಂದೆಡೆಯಾದರೆ, ಪಾಡ್ದನಗಳು, ವಾದನಗಳು ಇತ್ಯಾದಿ ಕಲಾಪ್ರಕಾರವೂ ತಲತಲಾಂತರದಿಂದ ನಾಡಲ್ಲಿ ಉಳಿದುಬಂದಿವೆ.ಪ್ರಕೃತಿ ಸಂರಕ್ಷಣೆಯ ದೃಷ್ಟಿಯಿಂದ ಬನಗಳು, ಕಾವುಗಳು ಇತ್ಯಾದಿ ಸಂರಕ್ಷಣೆಗೊಳ್ಳುತ್ತಾ ಉಳಿದಿದೆ. ಸಾಮಾಜಿಕ ಏಕತೆಗೂ ಸಂಕೇತಗಳಾಗಿ ನಾಡಿಗೆ ಮಾದರಿಯಾಗಿ ನಿಲ್ಲುವ ದೈವಗಳೂ ಜಿಲ್ಲೆಯಲ್ಲಿವೆ. ಮುಕ್ರಿದೈವ, ಉಮ್ಮಚ್ಚಿ ದೈವ ಇತ್ಯಾದಿಗಳು ಈ ಸಾಲಿಗೆ ಸೇರುತ್ತವೆ. ಜಿಲ್ಲೆಯಲ್ಲಿ ನಲಿಕೆಯವರು, ಕೋಪಾಳರು, ಕೊರಗರು, ಮಲೆಯರು, ವಣ್ಣಾನ್, ವೇಲರು, ಅಞೂಟ್ಟಾನ್, ಪರವರು, ವೆರವರು ಮೊದಲಾದ ಜನಾಂಗದವರು ದೈವಕೋಲವನ್ನು ಪರಂಪರಾಗತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಜಾನಪದಕಲೆಗಳು ಎಂದು ಕೆಲವರು ಈ ವಲಯವನ್ನು ಸೀಮಿತಗೊಳಿಸಿದರೂ, ಇಲ್ಲಿನ ಕಲಾತ್ಮಕತೆ, ಶಾಸ್ತ್ರೀಯತೆ ಬಲ್ಲವರಿಗಷ್ಟೇ ತಿಳಿದಿದೆ.ನೋಡುವ ಕಂಗಳಿಗೆ ದೃಶ್ಯವಿಸ್ಮಯವನ್ನು ಹುಟ್ಟಿಸುವ ಬಹಳ ಪ್ರಭಾವಶಾಲಿ ಮಾಧ್ಯಮಗಳಾಗಿಯೂ ದೈವಕೋಲಗಳ ಕೊಡುಗೆ ಅನನ್ಯವಾದುದು ಎಂದೇ ವಿಶ್ಲೇಷಿಸಲಾಗುತ್ತಿದೆ.
ಇನ್ನೊಂದೆಡೆ ದೈವಾರಾಧನೆಯನ್ನು ಸಾರ್ವಜನಿಕವಾಗಿ ಪ್ರದರ್ಶನ ವಸ್ತುವನ್ನಾಗಿ ಮಾಡುವುದರ ವಿರುದ್ಧ ಈ ಹಿಂದೆ ದೈವ ನರ್ತನ ಕಲಾವಿದರ ತಂಡವೊಂದು ಅಪಸ್ವರವನ್ನೂ ಎತ್ತಿತ್ತು.