HEALTH TIPS

ನ.೮ : ಮಧೂರು ಯಕ್ಷ ಸಂಭ್ರಮ


         ಮಧೂರು: ಯಕ್ಷಮಿತ್ರರು ಮಧೂರು ಇವರು ಸಾದರಪಡಿಸುವ ಮಧೂರು ಯಕ್ಷ ಸಂಭ್ರಮ ನ.೮ ರಂದು ಮಧೂರು ಸಮೀಪದ ಪರಕ್ಕಿಲ ದೇವಸ್ಥಾನದಲ್ಲಿ ಜರಗಲಿದೆ. ಸಂಜೆ ೬.೩೦ ರಿಂದ ಕೀಚಕ ಮತ್ತು ಪ್ರಚಂಡ ಭಾರ್ಗವ ಎಂಬ ಎರಡು ಪುರಾಣ ಆಖ್ಯಾನಗಳ ಅಮೋಘ ಯಕ್ಷಗಾನ ಪ್ರದರ್ಶನ ಜರಗಲಿದ್ದು ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸತ್ಯನಾರಾಯಣ ಪುಣಿಂಚಿತ್ತಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮುರಾರಿ ಕಡಂಬಳಿತ್ತಾಯ, ನೆಕ್ಕರಮೂಲೆ ಗಣೇಶ ಭಟ್, ಲವ ಕುಮಾರ ಐಲ, ವಸಂತ ವಾಮನಪದವು ಸಹಕರಿಸಲಿದ್ದಾರೆ. ವೇಷಗಾರಿಕೆಯಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರುಗಳಾದ ರಾಧಾಕೃಷ್ಣ ನಾವಡ, ಸುಬ್ರಾಯ ಹೊಳ್ಳ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಚಂದ್ರಶೇಖರ ಧರ್ಮಸ್ಥಳ, ಅಕ್ಷಯ್ ಕುಮಾರ್ ಮಾರ್ನಾಡ್, ಅಂಬಾಪ್ರಸಾದ್ ಪಾತಾಳ, ಬಾಲಕೃಷ್ಣ ಮಣಿಯಾಣಿ ಮವ್ವಾರು, ಗುರುರಾಜ ಹೊಳ್ಳ ಬಾಯಾರು, ಪ್ರಕಾಶ್ ನೀರ್ಚಾಲು ಮುಂತಾದವರು ಭಾಗವಹಿಸಲಿದ್ದಾರೆ. ತೆಂಕುತಿಟ್ಟಿನಲ್ಲಿ ಅಪೂರ್ವವಾಗಿರುವ ಯಕ್ಷಗಾನ ಆಖ್ಯಾನಗಳ ಪ್ರದರ್ಶನಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಯಕ್ಷಮಿತ್ರರು ಮಧೂರು ಸಂಸ್ಥೆಯು ಜನಮನ್ನಣೆಯನ್ನು ಪಡೆದಿದ್ದಾರೆ. ಈ ಪ್ರದರ್ಶನ ಸಂಸ್ಥೆಯ ೧೩ನೇ ಕಲಾಕಾಣಿಕೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries