ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಇತ್ತೀಚೆಗೆ ನಡೆದ ವಿಜ್ಞಾನ ಮೇಳದ ಉಪಜಿಲ್ಲಾ ಮಟ್ಟದಲ್ಲಿ ಪ್ರಥಮ ಎ ಗ್ರೇಡ್ ಹಾಗೂ ಜಿಲ್ಲಾ ಮಟ್ಟದಲ್ಲಿ ಎ ಗ್ರೇಡ್ ಪಡೆದ ಅನೂಪ್ ರಮಣ ಶರ್ಮ. ಜೊತೆಗೆ ಉಪಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಚಾಂಪ್ಯನ್ ಪಟ್ಟ ಗಳಿಸಿ ಜಿಲ್ಲಾ ಮಟ್ಟದಲ್ಲಿ 4ನೇ ಸ್ಥಾನವನ್ನೂ ಈತ ಪಡೆದಿದ್ದಾನೆ. ಡ್ರಾಮಾ ಜ್ಯೂನಿಯರ್ಸ್ ಬಹುಮಾನಿತನಾದ ಈತ ಮುಳ್ಳೇರಿಯದ ಅನುದಾನಿತ ಶಾಲಾ ವಿದ್ಯಾರ್ಥಿ ಹಾಗೂ ಪೆರ್ಲ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್. ಹಾಗೂ ಮುಳ್ಳೇರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪದ್ಮಾ ದಂಪತಿಗಳ ಪುತ್ರ.ಈತನ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ಡ್ರಾಮಾ ಜ್ಯೂನಿಯರ್ಸ್ ವಿಜೇತ ಅನೂಪ್ ರಮಣ ಶರ್ಮನಿಗೆ ವಿಜ್ಞಾನ ಮೇಳದಲ್ಲಿ ಎ ಗ್ರೇಡ್
0
ನವೆಂಬರ್ 15, 2019