ಪೆರ್ಲ: 'ಓದು ಬದುಕನ್ನು ಹಸನಾಗಿಸುತ್ತದೆ. ಸಮಯದ ಸದುಪಯೋಗವನ್ನು ಮಾಡಿಕೊಡುವುದರೊಂದಿಗೆ ಕಲಿಕೆಗೆ ಪ್ರಧಾನ ಪ್ರೇರಣಾ ಶಕ್ತಿಯಾಗಿ ಜೊತೆಗಿರುತ್ತದೆ. ಆದ್ದರಿಂದ ನಾಳೆಯ ಬೆಳಕುಗಳಾಗುವ ಮಕ್ಕಳು ಪುಸ್ತಕ, ಪತ್ರಿಕೆ, ಹಾಗೂ ಗ್ರಂಥಾಲಯಗಳ ಬಳಕೆಯ ಹವ್ಯಾಸಿಗಳಾಗಬೇಕು' ಎಂದು ಹಿರಿಯ ಸಾಹಿತಿ ಹರೀಶ್ ಪೆರ್ಲ ಅವರು ತಿಳಿಸಿದರು.
ಪೆರ್ಲ ಶ್ರೀಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಕ್ಕಳ ದಿನಾಚರಣೆಯ ಅಂಗವಾಗಿ ಗುರುವಾರ ಸಂಘಟಿಸಿದ ನಮ್ಮ ನಾಡಿನ 'ಸಾಧನೆಗಾರರೊಂದಿಗೆ ಸಂವಾದ' ಕಾಯ9ಕ್ರಮದಲ್ಲಿ ಪೆರ್ಲ ಗುಲಾಬಿ ನಿವಾಸಕ್ಕೆ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡಿದರು.
ಕೇರಳ ಸರ್ಕಾರದ ವಿದ್ಯಾಭ್ಯಾಸ ಇಲಾಖೆ ಈ ರೀತಿಯ ಪ್ರತಿಭಾ ಸಂದಶ9ನ ಯೋಜನೆಗೆ ರೂಪುನೀಡಿರುವುದು ಮಕ್ಕಳ ಸಾಧನೆಗೆ ಸ್ಪೂತಿ9ಯಾಗುತ್ತದೆ ಎಂದು ಅವರು ನುಡಿದರು.
ಡ್ರಾಮ ಜೂನಿಯರ್ಸ್ ಪ್ರತಿಭಾವಂತ ಅನೂಪ್ ರಮಣ ಶರ್ಮ, ಸವಿ ಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಇದರ ಸಂಚಾಲಕ ಸುಭಾಶ್ ಪೆರ್ಲ,
ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಉಪಸ್ಥಿತರಿದ್ದರು. ಕಾಯ9ಕ್ರಮ ಸಂಯೋಜಕ ಶಿಕ್ಷಕ ಉದಯ ಸಾರಂಗ ಸ್ವಾಗತಿಸಿ, ಕಲಂದರ್ ಬೀಬಿ ಟೀಚರ್ ವಂದಿಸಿದರು. ಈ ಸಂದರ್ಭ ಕವಿ ಹೃದಯದ ಸವಿ ಮಿತ್ರರು ವೇದಿಕೆಯ ವತಿಯಿಂದ ವಿದ್ಯಾರ್ಥಿಗಳಿಗೆ ಓದುವ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.