ಕುಂಬಳೆ: ಕೂಡ್ಲು ಮನೆತನದ ಪ್ರಸಿದ್ದ ಕಲಾವಿದ, ಸಾಮಾಜಿಕ, ಸಾಂಸ್ಕೃತಿಕ ಧಾರ್ಮಿಕ ರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಕೀರ್ತಿಶೇಷರಾದ ಕೂಡ್ಲು ಗೋಪಾಲಕೃಷ್ಣ ಶಾನುಭಾಗರ ಕುರಿತಾದ ಕೃತಿ ಕಾಂತಾವರ ಕನ್ನಡ ಸಂಘದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡಿತು. ಕಾಂತಾವರ ಉತ್ಸವದ ಅಂಗವಾಗಿ ಕನ್ನಡ ಭವನದಲ್ಲಿ ನಡೆದ ನಾಡಿಗೆ ನಮಸ್ಕಾರ ಗ್ರಂಥಮಾಲಿಕೆಯ ನೂತನ ಹೊತ್ತಗೆಗಳನ್ನು ಪ್ರಸಿದ್ದ ಲೇಖಕ, ಪರಿಸರ ತಜ್ಞ ಡಾ.ನರೇಂದ್ರ ರೈ ದೇರ್ಲ ಅನಾವರಣಗೊಳಿಸಿದರು. ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಅಧ್ಯಕ್ಷತೆ ವಹಿಸಿದ್ದರು.
ಅಭಿಜಾತ ಕಲಾವಿದ ಕೂಡ್ಲು ಗೋಪಾಲಕೃಷ್ಣ ಶಾನುಭಾಗರು ಕೃತಿಯ ಲೇಖಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರನ್ನು ಮತ್ತು ಗೋಪಾಲಕೃಷ್ಣ ಶಾನುಭೋಗರ ಪುತ್ರ ಕೆ.ವಿಷ್ಣು ಶಾನುಭೋಗ್ ಅವರನ್ನು ಕಾಂತಾವರ ಕನ್ನಡ ಸಂಘದ ವತಿಯಿಂದ ಈ ಸಂದರ್ಭ ಗೌರವಿಸಲಾಯಿತು. ಡಾ.ನಾ.ಮೊಗಸಾಲೆ, ಡಾ.ಬಿ.ಜನಾರ್ದನ ಭಟ್, ಅಮ್ಮೆಂಬಳ ಆನಂದ ಸಹಿತ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭ ಯುವ ಕವಿ, ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಅವರು ಬರೆದಿರುವ ಶಂಪಾ ದೈತೋಟ ಮತ್ತು ಬಿ.ವಿ.ಆಚಾರ್ಯ ಬರೆದಿರುವ ಕಾಸರಗೋಡು ವಾಸುದೇವ ಆಚಾರ್ಯ ಎಂಬ ಕೃತಿಗಳನ್ನೂ ಬಿಡುಗಡೆಗೊಳಿಸಲಾಯಿತು.
ಕೂಡ್ಲು ಗೋಪಾಲಕೃಷ್ಣ ಶಾನುಭಾಗರು ಸಂಗೀತ, ಚಿತ್ರಕಲೆ, ನಾಟಕ, ಶಿಲ್ಪ, ಯಕ್ಷಗಾನ ಮೊದಲಾದವುಗಳಲ್ಲಿ ಅನುಪಮ ಸಾಧನೆಗಳಿಂದ ಪ್ರಸಿದ್ದರಾಗಿದ್ದರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ೧೯೯೭ರಲ್ಲಿ ರಚಿಸಿದ್ದ ಕುತ್ಯಾಳ ಸಂಪದ ಕೃತಿಯಲ್ಲೂ ಕೀರ್ತಿಶೇಷ ಶಾನುಭಾಗರ ಬಗ್ಗೆ ಮಾಹಿತಿಗಳನ್ನು ಕಲೆಹಾಕಿದ್ದರು. ಅಪೂರ್ವ ದಾಖಲೆಗಳನ್ನೊಳಗೊಂಡ ಈ ಕೃತಿ ಮರುಮುದ್ರಣದ ಹಂತದಲ್ಲಿದೆ.