ನವದೆಹಲಿ: ಹಲವು ದಶಕಗಳ ಹಳೆಯದಾದ ಅಯೋಧ್ಯೆ ಭೂ ವಿವಾದಕ್ಕೆ ಸಂಬAಧಿಸಿದAತೆ ಸುಪ್ರೀಂಕೋರ್ಟ್ ಶನಿವಾರ ಚಾರಿತ್ರಿಕ ತೀರ್ಪು ಪ್ರಕಟಿಸಿದ ಬಳಿಕ ಟ್ವೀಟರ್ ನಲ್ಲಿ ಅಯೋಧ್ಯೆ ತೀರ್ಪು, ರಾಮಮಂದಿರ ಆರಂಭದAತಹ ಹ್ಯಾಷ್ ಟಾಗ್ ದೇಶ, ವಿದೇಶಗಳಲ್ಲಿ ಟ್ರೆಂಡಿAಗ್ ಸೃಷ್ಟಿಸಿತು.
ಮಧ್ಯಾಹ್ನ ೨-೩೦ರವರೆಗೂ ವಿಶ್ವದ ಟಾಪ್ ೧೦ರಲ್ಲಿ ಐದು ಹಾಗೂ ದೇಶದಲ್ಲಿ ಎಲ್ಲಾ ೧೦ ಟಾಪಿಕ್ಸ್ ಗಳು ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬAಧಿಸಿದ ಟ್ರೆಂಡಿAಗ್ ಆಗಿದ್ದವು. ದೇಶ ಹಾಗೂ ವಿದೇಶದಲ್ಲಿ ಅಯೋಧ್ಯೆ ತೀರ್ಪು ಹ್ಯಾಷ್ ಟಾಗ್ ೫೫೦,೦೦೦ ಕ್ಕೂ ಹೆಚ್ಚು ಟ್ವೀಟ್ ಗಳನ್ನು ಹೊಂದುವ ಮೂಲಕ ಟಾಪ್ ಟ್ರೆಂಡ್ ಆಗಿತ್ತು. ಭಾರತದಲ್ಲಿ ಬಾಬ್ರಿ ಮಸೀದಿ, ಅಯೋಧ್ಯೆ ಜಡ್ಜ್ ಮೆಂಟ್ ಮತ್ತು ರಾಮಜನ್ಮಭೂಮಿ ಹ್ಯಾಷ್ ಟಾಗ್ ಕೂಡಾ ಟಾಪ್ ಟ್ರೆಂಡ್ಸ್ ಆಗಿದ್ದವು. ಈ ಪೈಕಿ ರಾಮ ಮಂದಿರ ಹ್ಯಾಷ್ ಟಾಗ್ ಗೆ ೧೬೦, ೦೦೦ಕ್ಕೂ ಹೆಚ್ಚು ಟ್ವೀಟ್ ಹೊಂದುವ ಮೂಲಕ ಎರಡನೇ ಅತಿದೊಡ್ಡ ಟ್ರೆಂಡಿAಗ್ ಆಗಿತ್ತು. ಈ ಮಧ್ಯೆ ಸುಪ್ರೀಂಕೋರ್ಟ್ ಹ್ಯಾಷ್ ಟಾಗ್ ಕೂಡಾ ೨೦೦,೦೦೦ಕ್ಕೂ ಹೆಚ್ಚು ಟ್ವಿಟ್ ಗಳು ಬಂದಿದ್ದವು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದರಿಂದ ರಂಜನ್ ಗೋಗೊಯ್ ಕೂಡಾ ಟ್ರೆಂಡಿAಗ್ ನಲ್ಲಿದ್ದರು. ಹಿಂದೂ ಮುಸ್ಲಿಂ ಬಾಯ್ ಬಾಯ್ ಹ್ಯಾಷ್ ಟಾಗಿಗೂ ೩೩ ಸಾವಿರಕ್ಕೂ ಹೆಚ್ಚು ಟ್ವೀಟ್ ಹೊಂದುವ ಮೂಲಕ ಟ್ರೆಂಡಿAಗ್ ನಲ್ಲಿತ್ತು .