ಕಾಸರಗೋಡು: ನ.10ರಿಂದ 14 ವರೆಗೆ ಇರಿಯಣ್ಣಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಅಂಗವಾಗಿ ಪ್ರಕಟಿಸಲಾಗುವ ಸ್ಮರಣ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ.
ಕನ್ನಡ, ಇಂಗ್ಲಿಷ್ ಮತ್ತು ಮಲೆಯಾಳಂ ಭಾಷೆಗಳ ಲೇಖನಗಳನ್ನು ಆಹ್ವಾನಿಸಲಾಗಿದೆ. ಕಲೆ-ಸಂಸ್ಕೃತಿ-ಸಾಮಾಜಿಕ ವಲಯಗಳಕುರಿತು ವಿದ್ಯಾರ್ಥಿಗಳು,ಶಿಕ್ಷಕರು, ಸಾರ್ವಜನಿಕರು ಬರಹಗಳನ್ನು ಕಳುಹಿಸಬಹುದು. ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ವಿಶೇಷ ರೀತಿಯ ಚಿತ್ರಗಳು ಇತ್ಯಾದಿಗಳನ್ನು ಈ ಕೃತಿಯಲ್ಲಿ
ಅಳವಡಿಸಲಾಗುವುದು.
ಈ ಸಂಬಂಧ ಶಾಲೆಯಲ್ಲಿ ನಡೆದ ಸಭೆಯಲ್ಲಿ ಮುಳಿಯಾರು ಗ್ರಾಮಪಂಚಾಯತ್ ಅಧ್ಯಕ್ಷ ಪಿ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಂ.ಪ್ರದೀಪ್, ವಿಜಯನ್ ಪಾಣೂರು, ರಾಘವನ್ ಬೆಳ್ಳಿಪ್ಪಾಡಿ, ಜತೆ ಸಂಚಾಲಕರಾದ ಪಿ.ವಿ.ಪ್ರೀತಾ, ಬಿ.ಎಂ.ಪ್ರಕಾಶ, ರವೀಂದ್ರನ್ ಪಾಡಿ, ಉಣ್ಣಿಕೃಷ್ಣನ್ ಅಣಿಂಞ, ಬಿಂದು, ಅನಿಮಾ ಅನಿಲ್, ಸಜೀವನ್ ಮಡಪರಂಬತ್ ಮೊದಲಾದವರು ಉಪಸ್ಥಿತರಿದ್ದರು. ಸಂಚಾಲಕ ವಿನೋದ್ ಕುಮಾರ್ ಪೆರುಂಬಳ ವರದಿ ವಾಚಿಸಿದರು.