ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಣಾಸಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ತಾರಾಕೇಶ್ವರ ಮಹಾದೇವ ದೇವಾಲಯದಲ್ಲಿನ ಶಿವಲಿಂಗವನ್ನು ಅರ್ಚಕರು ಮಾಸ್ಕ್ ನಿಂದ ಮುಚ್ಚಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟದ ಸೂಚ್ಯಂಕದ ಪ್ರಕಾರ ೨೨೬ ನಗರಗಳಲ್ಲಿ ವಾಯುವಿನ ಗುಣಮಟ್ಟ ಕಳಪೆ ಮಟ್ಟದಿಂದ ಕೂಡಿದೆ. ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ಬೋಲೆ ಬಾಬಾನನ್ನು ವಿಷಕಾರಿ ಗಾಳಿಯಿಂದ ಸಂರಕ್ಷಿಸುವ ಉದ್ದೇಶದಿಂದ ಮಾಸ್ಕ್ ಹಾಕಲಾಗಿದೆ. ಬೋಲೆ ಬಾಬಾ ಸುರಕ್ಷಿತವಾಗಿದ್ದರೆ ಮಾತ್ರ ನಾವೆಲ್ಲಾ ಸುರಕ್ಷಿತವಾಗಿರುತ್ತೇವೆ ಎಂದು ನಂಬಿರುವುದಾಗಿ ಭಕ್ತಾಧಿ ಅಲೋಕ್ ಮಿಶ್ರಾ ಸುದ್ದಿಸಂಸ್ಥೆಯೊAದಕ್ಕೆ ತಿಳಿಸಿದ್ದಾರೆ.
ವಾಯುಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿಷಕಾರಿ ಗಾಳಿಯಿಂದ ಶಿವಲಿಂಗವನ್ನು ರಕ್ಷಿಸುವ ಅಗತ್ಯವಿದೆ. ಚಳಿಗಾಲದಲ್ಲಿ ಸ್ವೇಟರ್ , ಬೇಸಿಗೆ ಕಾಲದಲ್ಲಿ ಏರ್ ಕಂಡೀಷನರ್ ಹಾಕುವಂತೆ ಇದೀಗ ಕೆಟ್ಟ ಗಾಳಿಯಿಂದ ರಕ್ಷಿಸಲು ಮಾಸ್ಕ್ ಹಾಕಿರುವುದಾಗಿ ಆರ್ಚಕ ಸಂದೀಪ್ ಮಿಶ್ರಾ ತಿಳಿಸಿದ್ದಾರೆ.