ಕಾಸರಗೋಡು: ಬೆದ್ರಡ್ಕ ಭೆಲ್ ಸಂಸ್ಥೆಯ ಸಿಬ್ಬಂದಿಗಾಗಿ ಜೀವನ ಶೈಲಿ ರೋಗ ಪತ್ತೆ ವೈದ್ಯಕೀಯ ಶಿಬಿರ ಜರುಗಿತು. ಮೊಗ್ರಾಲ್ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರ ವತಿಯಿಂದ "ಆರೋಗ್ಯ ಪೂರ್ಣ, ಸೌಹಾರ್ದಯುತ ಕಾಯಕ ಕೇಂದ್ರ" ಯೋಜನೆ ಅಂಗವಾಗಿ ಈ ಶಿಬಿರ ಜರುಗಿತು. ರಕ್ತದೊತ್ತಡ, ಸಿಹಿಮೂತ್ರ, ಕೊಬ್ಬುರೋಗಳು, ನೇತ್ರ ದೋಷ ಇತ್ಯಾದಿಗಳ ತಪಾಸಣೆ ಜೊತೆಗೆ ಆರೋಗ್ಯ ಜಾಗೃತಿಯೂ ನಡೆಯಿತು. ಜಿಲ್ಲಾ ವೈದ್ಯಕೀಯ ಕಚೇರಿಯಿಂದ ಸಂಚರಿಸುವ ಲ್ಯಾಬ್ ವಾಹನ ಸೇವೆಯೂ ಇದರ ಜೊತೆಗಿತ್ತು. ಬೊಜ್ಜು ಪತ್ತೆಗಾಗಿ ಬಿ.ಎಂ.ಐ. ತಪಾಸಣೆಯೂ ನಡೆಯಿತು. ೨೭ ಮಮದಿಗೆ ಹೈಪರ್ ಟೆನ್ಶನ್, ೧೭ ಮಂದಿಗೆ (ಶೇ ೨೭)ಸಿಹಿಮೂತ್ರ ರೋಗ, ೬೨ ಜನರಲ್ಲಿ ಶೇ ೪೦ ಮಂದಿಗೆ ರಕ್ತದೊತ್ತಡ ಪತ್ತೆಯಾಗಿದೆ.
ಭೆಲ್ ಸಮೂಹ ಮುಖ್ಯಸ್ಥ ಜೋಶಿ ಕುರಿಯಾಕೋಸ್ ಶಿಬಿರವನ್ನು ಉದ್ಘಾಟಿಸಿದರು. ಎಚ್.ಆರ್.ಎ. ಮುಖ್ಯಸ್ಥ ವಿ.ಎಸ್.ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಡಾ.ನಾಸ್ಮಿನ್ ಜೆ.ನಝೀರ್ ತರಗತಿ ನಡೆಸಿದರು. ಹೆಲ್ತ್ ಇನ್ಸ್ ಪೆಕ್ಟರ್ ಬಿ.ಅಶ್ರಫ್,ಜೆ.ಎಚ್.ಐ.ರಂಜೀವ್ ರಾಘವನ್, ಜೆ.ಪಿ.ಎಚ್.ಎನ್.ಗಳಾದ ರಾಜಿ, ಸುಲೇಖಾ, ಒಪ್ಟೋ ಮೆಟ್ರಿಸ್ಟ್ ಶಶಿಕಲಾ, ಆಶಾ ಕಾರ್ಯಕರ್ತೆಯರಾದ ಸುಜಾತಾ, ಝಕೀನಾ, ಇಂದಿರಾ ನೇತೃತ್ವ ವಹಿಸಿದ್ದರು.