HEALTH TIPS

ಮಂಜೇಶ್ವರ ಉಪಜಿಲ್ಲಾ ಕಲೋತ್ಸವ-ಚಿತ್ರ ವೃತ್ತಿ-ಗಮನ ಸೆಳೆವ ಕರಕುಶಲ ವಸ್ತುಗಳ ಪ್ರದರ್ಶನ

         
     ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಅಂಗವಾಗಿ ಉಪಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರ ವತಿಯಿಂದ ಏರ್ಪಡಿಸಲಾದ ಚಿತ್ರ-ವೃತ್ತಿ ಕರಕುಶಲ ಪ್ರದರ್ಶನವನ್ನು ಗುರುವಾರ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಭಾವನೆಗಳಿಗೆ ಮೂರ್ತ ರೂಪವನ್ನು ಒದಗಿಸಿ ಕೊಡುವ ಚಿತ್ರಗಳು ಸಾರ್ವಕಾಲಿನ ಮೌಲ್ಯದ್ದಾಗಿದೆ. ಇಂದು ಆಧುನಿಕ ಡಿಜಿಟಲ್ ರೂಪದ ಚಿತ್ರಗಳು ಪ್ರಚುರಗೊಳ್ಳುತ್ತಿದ್ದರೂ, ಪಾರಂಪರಿಕ ಶೈಲಿಯ ಕುಂಚದಲ್ಲಿ ಅರಳುವ ಗೆರೆಗಳಿಗೆ ದುಗುಡದ ಅಂತರಂಗವನ್ನು ವರ್ಣಮಯಗೊಳಿಸುವ ಶಕ್ತಿ ಇದೆ ಎಂದು ತಿಳಿಸಿದರು. ಚಿತ್ರಕಲಾ ಶಿಕ್ಷಕರ ಪ್ರದರ್ಶನದಂತಹ ಚಟುವಟಿಕೆಗಳು ಪ್ರೇರಣೆ ನೀಡಲಿ ಎಂದು ಅಭಿಪ್ರಾಯಪಟ್ಟರು.
    ಉಪಜಿಲ್ಲಾ ಕಲೋತ್ಸವ ಸಮಿತಿ ಸಂಚಾಲಕಿ ಶಶಿಕಲಾ, ಪೈವಳಿಕೆ ನಗರ ಶಾಲಾ ಹಿರಿಯ ಶಿಕ್ಷಕ ರವೀಂದ್ರನಾಥ ಕೆ.ಆರ್., ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ ಹಾಗೂ ವಿವಿಧ ಸಮಿತಿಗಳ ಸಂಚಾಲಕರು ಉಪಸ್ಥಿತರಿದ್ದು ಶುಭಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ಲತೀಫ್ ಕೊಕ್ಕೆಜಾಲ್ ಸ್ವಾಗತಿಸಿ, ವಂದಿಸಿದರು.
   ಪ್ರಸಿದ್ದ ಚಿತ್ರಕಲಾವಿದ, ಮಂಜೇಶ್ವರ ಎಸ್.ಎ.ಟಿ.ಶಾಲಾ ಚಿತ್ರಕಲಾ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ, ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಚಿತ್ರಕಲಾ ಶಿಕ್ಷಕ ಪ್ರಕಾಶ್ ಕುಂಬಳೆ ಮತ್ತು ಮಹೇಶ್ ಕಿದೂರು ಅವರು ರಚಿಸಿದ ಚಿತ್ರಗಳ ಸಹಿತ ಪೈವಳಿಕೆ ನಗರ ಶಾಲಾ ವಿದ್ಯಾರ್ಥಿಗಳ ಕರಕುಶಲ ವಸ್ತುಗಳು ಪ್ರದರ್ಶನದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಪ್ರದರ್ಶನಗೊಂಡ ಇತರ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ಕರಕುಶಲ ವಸ್ತುಗಳು, ಚಿತ್ರಗಳನ್ನು ಆಸಕ್ತರ ವೀಕ್ಷಣೆಗೆ ಪ್ರದರ್ಶಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries