ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಕೇರಳೋತ್ಸವದ ಸಮಾರೋಪ ಸಮಾರಂಭವು ಗುರುವಾರ ಬೋಳುಕಟ್ಟೆ ಕ್ರೀಡಾಂಗಣದಲ್ಲಿ ಜರಗಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಟ್ರೋಫಿಯನ್ನು ವಿತರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಮಪಂಚಾಯಿತಿ ಕಾರ್ಯದರ್ಶಿ ಎಂ. ಪ್ರದೀಪನ್, ಸದಸ್ಯರುಗಳಾದ ಮುಹಮ್ಮದ್ ನಿಸಾರ್, ಮುನೀರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ನೌಕರ ವೃಂದದವರಿಂದ ನಡೆದ ಫುಟ್ಭಾಲ್ ಪಂದ್ಯಾಟವು ಎಲ್ಲರ ಗಮನಸೆಳೆಯಿತು. ಅಧ್ಯಕ್ಷರು ಚೆಂಡನ್ನು ಪಾಸ್ ಮಾಡುವ ಮೂಲಕ ಸೌಹಾರ್ದ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದ್ದರು. ಪಂದ್ಯಾಟದ ಕೊನೆಯಲ್ಲಿ 2-0 ಗೋಲುಗಳ ಅಂತರದಲ್ಲಿ ನೌಕರವೃಂದದವರು ಸದಸ್ಯರ ತಂಡವನ್ನು ಪರಾಭವಗೊಳಿಸಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಕೇರಳೋತ್ಸವ ಸಮಾರೋಪ
0
ನವೆಂಬರ್ 29, 2019