ಕಾಸರಗೋಡು: ಯಕ್ಷಗಾನ ಬೊಂಬೆಯಾಟದ ಮೂಲಕ ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನು ಉತ್ತುಂಗಕ್ಕೇರುವಂತೆ ಮಾಡುವಲ್ಲಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಪಾತ್ರ ಮಹತ್ತರವಾದುದು ಎಂದು ಫೋಕ್‍ಲ್ಯಾಂಡ್ ಅಧ್ಯಕ್ಷ ಡಾ. ವಿ.ಜಯರಾಜನ್ ತಿಳಿಸಿದ್ದಾರೆ.
ಅವರು ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ಆರಂಭಿಸಲಾದ ವಿನೂತನ ಯೋಜನೆ'ಶಾಲೆಯತ್ತ ಬೊಂಬೆ ಚಿತ್ತ'ಅಭಿಯಾನವನ್ನು ಕಾಸರಗೋಡಿನ ಮೆಡೋನ್ನ ಎಯುಪಿ ಶಾಲಾ ಸಭಾಂಗಣದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲೆಯಲ್ಲಿ ಹುಟ್ಟಿಕೊಂಡಿರುವ ಈ ಸಂಘಟನೆ ಅಭೂತಪೂರ್ವ ಯಕ್ಷಗಾನ ಬೊಂಬೆ ಕುಣಿತದಿಂದ ದೇಶ, ವಿದೇಶಕ್ಕೆ ತನ್ನ ಖ್ಯಾತಿ ವಿಸ್ತರಿಸಿದೆ. ಈ ಮೂಲಕ ದೇಶದ ಸಾಂಸ್ಕøತಿಕ ನಕಾಶೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸಂಘಟನೆಯ ಪ್ರಧಾನ ಸೂತ್ರಧಾರಿ ರಮೇಶ್ ಅವರ ಸಾಧನೆ ಹಾಗೂ ಶ್ರಮ ಸಂಘಟನೆಯ ಹಿಂದೆ ಅಡಕವಾಗಿದೆ. ಈ ಮಹಾನ್‍ಕಲೆಯನ್ನು ಮುಂದಿನ ತಲೆಮಾರಿಗೆ ವಿಸ್ತರಿಸಬೇಕಾದರೆ, ವಿದ್ಯಾರ್ಥಿಗಳಿಗೆ ಈ ಕಲೆಯಲ್ಲಿ ಆಕಸತಿ ಮೂಡಿಸುವುದು ಅನಿವಾರ್ಯ ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭೂತಪೂರ್ವ ಕಲೆಯಾಗಿರುವ ಯಕ್ಷಗಾನ ಬೊಂಬೆಯಾಟ ಸಂಸ್ಥೆಗೆ ನಗರಸಭೆಯಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಬದ್ಧ ಎಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ರೋಶ್ನಾ ಎ.ಸಿ, ಸಾಂಸ್ಕøತಿಕ ಸಂಘಟಕ ಗುರುಪ್ರಸಾದ್ ಕೋಟೆಕಣಿ, ಸಂಘದ ನಿರ್ದೇಶಕ್ ರಮೇಶ್ ಕೆ.ವಿ ಉಪಸ್ಥಿತರಿದ್ದರು.
ಂದರ್ಭ ಬೊಂಬೆಕುಣಿತದ ಸೂತ್ರಧಾರಿಗಳಾಗಿ ರಂಗಪ್ರವೇಶ ಮಾಡಿದ ಭವ್ಯಶ್ರೀಬಲ್ಲಾಳ್, ಸ್ವಾತಿ ಕೆ.ವಿ ಸರಳಿ, ಸುನಿತಾ ಮಯ್ಯ ಮಧೂರು, ಶೋಭಾ ಯು. ಆಚಾರ್ಯ, ಸವಿತಾ ಕೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಂಧ್ಯಾಕುಮಾರಿ ಟಈಚರ್ ಸ್ವಾಗತಿಸಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭವ್ಯಶ್ರೀ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.ಸ್ವಾತಿ ಕೆ.ವಿ ಸರಳಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ನರಕಾಸುರ ವಧೆ ಯಕ್ಷಗಾನ ಬೊಂಬೆಯಾಟ ಜರುಗಿತು.