ಬದಿಯಡ್ಕ : ಬೆಂಗಳೂರಿನ ಕೆದಿಲಾಯ ಪ್ರತಿಷ್ಠಾನ ಹಾಗೂ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ನ.೧೦ರಂದು ಬೆಳಗ್ಗೆ ೯.೩೦ರಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ ಕನ್ನಡ ಶತಕವಿಗೋಷ್ಠಿ-೨೦೧೯ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ನಿವೃತ್ತ ಸತ್ರ ನ್ಯಾಯಾಧೀಶ ಬೆಂಗಳೂರಿನ ಪದ್ಮನಾಭ ಕೆದಿಲಾಯ ದೀಪ ಬೆಳಗಿಸಿ ಉದ್ಘಾಟಿಸುವರು. ಶಿಕ್ಷಣರತ್ನ ಪ್ರಶಸ್ತಿ ವಿಜೇತೆ, ವಿಶ್ವೇಶ್ವರಯ್ಯ ಸಾಧಕ ಪ್ರಶಸ್ತಿ ವಿಜೇತರಾದ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ನಡೆಯುವ ಕನ್ನಡ ಶತಕವಿಗೋಷ್ಠಿಯನ್ನು ಚಲನಚಿತ್ರ ನಟ, ಪ್ರಾಸ ಸಾಹಿತಿ ಕಾರ್ಕಳ ಶೇಖರ ಭಂಡಾರಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಯುವ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಹೂಹಳ್ಳಿ ನಾಗರಾಜ್, ನ್ಯಾಯವಾದಿ ಪರಿಮಳಾ ಮಂಗಳೂರು ಭಾಗವಹಿಸುವರು, ಕಾರ್ಯಕ್ರಮದಲ್ಲಿ ಅಭಿಜ್ಞಾ ಬೊಳಂಬು, ಶ್ರೀಶಕುಮಾರ ಪಂಜಿತ್ತಡ್ಕ, ವಿರಾಜ್ ಅಡೂರು, ಶಶಿಕಲಾ ಕುಂಬಳೆ, ಅಮಿಶಾ ಎಸ್ ಎನ್, ಆಶಿತಾ ಎಂ ಮೊದಲಾದವರು ಉಪಸ್ಥಿತರಿರುವರು. ಕಾಸರಗೋಡು ಜಿಲ್ಲೆಯ ೧೦೦ಕ್ಕೂ ಮಿಕ್ಕಿದ ಮಕ್ಕಳು ಈ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.