ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಯ್ಯಾರು ಡೋನ್ ಬೋಸ್ಕೊ ಶಾಲೆ ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕೃತೋತ್ಸವದಲ್ಲಿ ಮತ್ತು ಜನರಲ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳಿಸಿದೆ. ಜೊತೆಗೆ ಕಿರಿಯ ಪ್ರಾಥಮಿಕ ವಿಭಾಗದ ಜನರಲ್ ಹಾಗೂ ಅರಬಿಕ್ ಕಲೋತ್ಸವದಲ್ಲೂ ದ್ವಿತೀಯ ಚಾಂಪಿಯನ್‌ಶಿಪ್ ಗಳಿಸಿದೆ. ಹಿರಿಯ ಪ್ರಾಥಮಿಕ ವಿಭಾಗದ ಜನರಲ್ ನಾಟಕ ಹಾಗೂ ಸಂಸ್ಕೃತ ನಾಟಕದಲ್ಲಿ ಉತ್ತಮ ನಟ ಹಾಗೂ ನಟಿ ಪ್ರಶಸ್ತಿಯೊಂದಿಗೆ ಪ್ರಥಮ ಸ್ಥಾನ ಗಳಿಸಿದೆ.
ಪ್ರಶಸ್ತಿ ಪಡೆದು ಶಾಲೆಯ ಕೀರ್ತಿಗೆ ಪಾತ್ರರಾದ ಶಾಲಾ ಮಕ್ಕಳಿಗೆ ಡೋನ್ ಬೋಸ್ಕೊ ಶಾಲಾ ಸಂಚಾಲಕರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಚಿದಾನಂದ ಮಯ್ಯ, ಮಾತೃ ಸಂಘದ ಅಧ್ಯಕ್ಷೆ ರೇಣುಕಾ ಹಾಗೂ ಮುಖ್ಯೋಪಾಧ್ಯಾಯರು ಅಭಿನಂದನೆಯನ್ನು ಸಲ್ಲಿಸಿರುವರು.