ಕಾಸರಗೋಡು: ಮಧ್ಯಕಾಲೀನ ಸಾಹಿತ್ಯ ಸಂದರ್ಭ ಕಂಡುಬಂದ ರತ್ನಾಕರ ವರ್ಣಿಯ ಸಾಹಿತ್ಯಗಳು ಅಧ್ಯಾತ್ಮಿಕದ ಉತ್ತುಂಗಕ್ಕೇರಿ, ಆತ್ಮಶೋಧನೆಯ ನೆಲೆಗೆ ಇಳಿದಿತ್ತು ಎಂದು ಹಿರಿಯ ವಿದ್ವಾಂಸ ಡಾ. ರಾಜಪ್ಪ ದಳವಾಯಿ ತಿಳಿಸಿದ್ದಾರೆ.
ಅವರು ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಪ್ರಾಯೋಜಕತ್ವದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನವಿಭಾಗ ಮತ್ತು ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದ ವತಿಯಿಂದ ಸೋಮವಾರ ಕಾಸರಗೋಡು ಸರ್ಕಾರಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ 'ಮಹಾಕವಿ ರತ್ನಾಕರವರ್ಣಿ ಸಾಹಿತ್ಯ- ಸಾಂಸ್ಕøತಿಕ ಆಯಾಮಗಳು' ಎಂಬ ವಿಷಯದ ಕುರಿತಾಗಿ ನಡೆದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು .
"ರತ್ನಾಕರವರ್ಣಿ ಆತ್ಮ ಮತ್ತು ಅಧ್ಯಾತ್ಮವನ್ನು ಶೋಧಿಸಿದ ಕವಿ. ಭಾಗವತ ಕವಿಗಳ ಪ್ರಭಾವ ಈತನ ಮೇಲಾಗಿರುವುದನ್ನು ಕಾಣಲುಸಾಧ್ಯ. ಭಾಗವತದ ಶ್ರೀಕೃಷ್ಣನಿಗೆ ಪ್ರತಿಸ್ಪರ್ಧಿಯಾಗಿ ಭರತೇಶ ವೈಭವದ ಭರತನನ್ನು ಕಾಣುತ್ತೇವೆ. ಭರತೇಶ ವೈಭವವು ಯೋಗ-ಭೋಗಗಳ ತೊಡಕನ್ನು ಹೋಗಲಾಡಿಸಿ ಇವೆರಡನ್ನು ಸಮನ್ವಯಗೊಳಿಸಿದ ಮಹತ್ವದ ಸಂಕಥನವಾಗಿದೆ. ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಕವಿಗಳ ಸಾಲಿಗೆ ಸೇರಿದ ಯೋಗ ಮತ್ತು ಭೋಗವನ್ನು ಸಮನ್ವಯಗೊಳಿಸಿ ಅವೆರಡನ್ನೂ ಬದುಕಿನ ಪ್ರಗತಿಗೆ ಆಕರ ಮಾಡಿಕೊಂಡ ಕವಿ ಎಂಬ ನೆಲೆಯಲ್ಲಿ ರತ್ನಾಕರವರ್ಣಿಗೆ ಕನ್ನಡ ಸಾಹಿತ್ಯದಲ್ಲಿ ಅದ್ವಿತೀಯ ಸ್ಥಾನವಿದೆ" ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ. ಎ. ಎಲ್. ಅನಂತಪದ್ಮನಾಭ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಡುಗಬ್ಬವಾದ ಸಾಂಗತ್ಯ ಪ್ರಕಾರದಲ್ಲಿ ರತ್ನಾಕರವರ್ಣಿಯು ಸಾಹಿತ್ಯವನ್ನು ಸಂಗೀತದ ಜೊತೆಗೆ ಸಮ್ಮಿಳನಗೊಳಿಸಿ ಜನಮಾನಸವನ್ನು ತಲುಪುವುದಕ್ಕೆ ಸಾಧ್ಯವಾಯಿತು ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರರ್ಣಿ ಅಧ್ಯಯನಪೀಠದ ಸಂಯೋಜಕ ಪೆÇ್ರ.ಸೋಮಣ್ಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಸುಜಾತ ಎಸ್. ಸ್ವಾಗತಿಸಿದರು. ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದರು. . ಸ್ನಾತಕೋತ್ತರ ವಿದ್ಯಾರ್ಥಿನಿ ಶ್ರದ್ಧಾ ಭಟ್ ನಾಯರ್ಪಳ್ಳ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿ ಕಾಯಕ್ರಮ ನಿರೂಪಿಸಿದರು. ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ರಾಧಾಕೃಷ್ಣ ಬೆಳ್ಳೂರು ವಂದಿಸಿದರು
ಉದ್ಘಾಟನಾ ಕಾರ್ಯಕ್ರಮದ ನಂತರ ಮೊದಲ ಅವಧಿಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನಸಹಾಯಕ ಪ್ರಾಧ್ಯಾಪಕ ಮಾಧವ ಮೂಡುಕೊಣಾಜೆ 'ರತ್ನಾಕರವರ್ಣಿಯ ಭರತೇಶ ವೈಭವ ದೇಶೀಯತೆ' ಎಂಬ ವಿಷಯದಲ್ಲಿಯೂ,ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಸ್ವಾಮಿ ನಾ. ಕೋಡಿಹಳ್ಳಿ 'ಭರತೇಶ ವೈಭವದಲ್ಲಿ ಯುದ್ಧ ಮತ್ತುಶಾಂತಿ' ವಿಷಯದಲ್ಲಿವಿಚಾರಮಂಡಿಸಿದರು.ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡವಿಭಾಗದ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ವಿಭಾಗದ ಸಹಾಯಕಪ್ರಾಧ್ಯಾಪಕ ಡಾ.ಶ್ರೀಧರ ಎನ್. ಸ್ವಾಗತಿಸಿದರು. ಕನ್ನಡವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಡಾ. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ:
ಮಧ್ಯಾಹ್ನ 'ಭರತೇಶ ವೈಭವ -ಅಲಕ್ಷಿತ ಓದಿನ ನೆಲೆಗಳು' ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದ ಸಂಶೋಧನ ವಿದ್ಯಾರ್ಥಿ ಲಕ್ಷ್ಮೀಕಾಂತ ಸಿದ್ಧಪಡಿಸಿದ ಪ್ರಬಂಧವನ್ನು ಮಂಡಿಸಲಾಯಿತು. 'ರತ್ನಾಕರವರ್ಣಿಯ ಕೃತಿಯ ಅನನ್ಯತೆಗಳು' ಎಂಬ ವಿಷಯದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಂಶೋಧನವಿದ್ಯಾರ್ಥಿ ವಿದ್ಯಾಲಕ್ಷ್ಮಿ ಕೆ. ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್. ಅಧ್ಯಕ್ಷತೆ ವಹಿಸಿದರು. ಕನ್ನಡ ವಿಭಾಗದಸಹಾಯಕ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಬಿ.ಎಂ. ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಸವಿತಾ ಬಿ. ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ವಿದ್ವಾಂಸರಾದ ಮುನಿರಾಜ ರೆಂಜಾಳ ಸಮಾರೋಪ ಭಾಷಣ ಮಾಡಿದರು. ಪೆÇ್ರ. ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜೇಶ್ ಬೆಜ್ಜಂಗಳ, ಸುಜಾತ ಎಸ್, ಡಾ. ರತ್ನಾಕರ ಮಲ್ಲಮೂಲೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ವೇದಾವತಿ ಎಸ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ರವಿಶಂಕರ ಜಿ.ಕೆ. ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಬ್ಬಂಧಿಗಳಾದ ಚಂದ್ರಶೇಖರ ಬಿ.ಎಂ, ಮಂಜುನಾಥ ಅಲ್ಲದೆಸಾಹಿತ್ಯಾಸಕ್ತರು, ಸಂಶೋಧನ, ಸ್ನಾತಕೋತ್ತರ, ಪದವಿ ವಿದ್ಯಾರ್ಥಿಗಳು ಭಾಗವಹಿಸಿದರು.