HEALTH TIPS

ಬಾಲಗೋಕುಲಗಳ ಶಿಕ್ಷಕಿಯರ ಪ್ರಶಿಕ್ಷಣ ಶಿಬಿರ

         
      ಕಾಸರಗೋಡು: ಬಾಲಗೋಕುಲ ಕಾಸರಗೋಡು ತಾಲ್ಲೂಕಿನ ಮಧೂರು ಮಂಡಲ(ಪಂಚಾಯತ್), ಮೊಗ್ರಾಲ್ ಪುತ್ತೂರು ಮಂಡಲ(ಪಂಚಾಯತ್) ಮತ್ತು ಕಾಸರಗೋಡು ನಗರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಾಲಗೋಕುಲಗಳ ಶಿಕ್ಷಕಿಯರು ಮತ್ತು ಕಾರ್ಯಕರ್ತರ ಒಂದು ದಿನದ ಪ್ರಶಿಕ್ಷಣ ಶಿಬಿರ ಕಾಸರಗೋಡು ತಾಳಿಪಡ್ಪಿನ ಅಭಯ (ರಾ.ಸ್ವ.ಸಂಘ ಕಾರ್ಯಾಲಯ) ದಲ್ಲಿ ನಡೆಯಿತು.
     ಮಹಾಮಂಡಲ ಅಧ್ಯಕ್ಷ ಬಾಲಚಂದ್ರ ಕೊರುವೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ಬಾಲಗೋಕುಲ ಕಾಸರಗೋಡು ತಾಲ್ಲೂಕು ಅಧ್ಯಕ್ಷ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ನಂತರ ವಿವಿಧ ತರಗತಿಗಳಲ್ಲಾಗಿ ದೇಶಭಕ್ತಿ ಗೀತೆ, ಶ್ರೀ ರಾಮ ಸ್ತೊತ್ರ, ಭಗವದ್ಗೀತೆ ಇತ್ಯಾದಿಗಳನ್ನು ಕಲಿಸಿಕೊಡಲಾಯಿತು. ಬಾಲಗೋಕುಲ ಬಳಗದ ವೀಣಾ ಟೀಚರ್, ಶ್ರೀಲತಾ ಟೀಚರ್ ಮತ್ತು ಸ್ವಪ್ನ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ಭಾರತೀಯ ಆಚಾರ ವಿಚಾರಗಳಲ್ಲಿ ಅಡಕವಾಗಿರುವ ವೈಜ್ಞಾನಿಕ ಮಹತ್ವ ಗಳನ್ನು ನವೀನ ಎಲ್ಲಂಗಳ ಅವರು ಮನಮುಟ್ಟುವಂತೆ ವಿವರಿಸಿದರು.
     ಶಿಕ್ಷಾರ್ಥಿಗಳಿಂದ ಅನುಭವ ಕಥನ ಮತ್ತು ಸಮಾರೋಪದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಭಾಗವಹಿಸಿದ ಎಲ್ಲ ಕಾರ್ಯಕರ್ತರು ಪ್ರೇರಣೆಯ ಪ್ರಸನ್ನತೆಯೊಂದಿಗೆ ಕಾರ್ಯಕ್ಷೇತ್ರಕ್ಕೆ ಮರಳಿದರು. ಮೂರೂ ಮಂಡಲಗಳಿಂದ ಒಟ್ಟಾಗಿ ಸುಮಾರು 230 ಜನರು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries