ನವದೆಹಲಿ: ಆಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳಲಿದ್ದಾರೆ ತೀರ್ಪಿನ ವಿರುದ್ಧ ಮರು ಪರಿಶೀಲನಾ ಆರ್ಜಿ ಸಲ್ಲಿಕೆಗೆ ತಮ್ಮ ಸಮ್ಮತಿಯಿಲ್ಲ ಎಂದು ದೆಹಲಿಯ ಜಾಮಾ ಮಸೀದಿ ಶಾಹಿ ಇಮಾಂ ಸೈಯದ್ ಅಹಮದ್ ಬುಖಾರಿ ಶನಿವಾರ ಹೇಳಿದ್ದಾರೆ.
ದೇಶದ ಮುಸ್ಲಿಮರು ಶಾಂತಿ, ನೆಮ್ಮದಿಯ ಬದುಕು ಬಯಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಅದನ್ನು ಸ್ವೀಕರಿಸುವುದಾಗಿ ಈಗಾಗಲೇ ಮುಸ್ಲಿಂ ಸಮುದಾಯ ಸ್ಪಷ್ಟಪಡಿಸಿದೆ ಎಂದು ಬುಖಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಾವು ತೀರ್ಪನ್ನು ಸ್ವೀಕರಿಸಿದ್ದೇವೆ ಹಲವು ವರ್ಷಗಳಿಂದ ನಡೆಯುತ್ತಿರುವ ಹಿಂದೂ-ಮುಸ್ಲಿA ನಡುವಿನ ವಿವಾದ ಇಲ್ಲಿಗೆ ಈಗ ಕೊನೆಗೊಳ್ಳಬೇಕು ಎಂದು ಬುಖಾರಿ ಹೇಳಿದರು.