HEALTH TIPS

ಇಂದು ಅಯೋಧ್ಯೆ ವಿವಾದದ ಮಹಾತೀರ್ಪು: ದೇಶದೆಲ್ಲೆಡೆ ಬಿಗಿ ಭದ್ರತೆ

      ನವದೆಹಲಿ: ಅಯೋಧ್ಯೆ ರಾಮಮಂದಿರ ಮತ್ತು ಬಾಬ್ರಿ ಮಸೀದಿ ವಿವಾದದ ಕುರಿತು ವಿಚಾರಣೆ ಮುಗಿಸಿರುವ ಸುಪ್ರೀಂಕೋರ್ಟ್?ನ ಸಂವಿಧಾನ ಪೀಠ ಇಂದು ಬೆಳಿಗ್ಗೆ ೧೦.೩೦ಕ್ಕೆ ತೀರ್ಪು ಪ್ರಕಟಿಸಲಿದೆ.
      ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸಂವಿಧಾನ ಪೀಠ ತನ್ನ ತೀರ್ಪು ಪ್ರಕಟಿಸುವ ವಿಷಯವನ್ನು ಸುಪ್ರೀಂಕೋರ್ಟ್ ನ ಮೂಲಗಳು ಖಚಿತಪಡಿಸುತ್ತಲೇ ದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗುತ್ತಿದೆ. ಅಯೋಧ್ಯೆ ನಗರದಲ್ಲಂತೂ ೪ ಸಾವಿರಕ್ಕೂ ಹೆಚ್ಚು ಅರೆಮಿಲಿಟರಿ ಪಡೆ ಯೋಧರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅಗತ್ಯಬಿದ್ದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಅಯೋಧ್ಯೆಗೆ ರವಾನಿಸಲು ಅನುವಾಗುವಂತೆ ಕೇಂದ್ರ ಸರ್ಕಾರ ೨ ಹೆಲಿಕಾಪ್ಟರ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ.
     ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಮನವಿ:
      ಅಯೋಧ್ಯೆ ತೀರ್ಪು ಪ್ರಕಟವಾಗುವ ಕಾಲ ಸನ್ನಿಹಿತವಾಗುತ್ತಿರುವಂತೆ ಸಂಭ್ರಮಾಚರಣೆಯ ಹೆಸರಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕದಡದಂತೆ ಎಚ್ಚರವಹಿಸಬೇಕು ಎಂದು ಪೇಜಾವರಶ್ರೀಗಳು ಸೇರಿ ದೇಶದ ವಿವಿಧ ಮಠಗಳ ಸ್ವಾಮೀಜಿಗಳು, ಮುಸ್ಲಿಂ ಧಾರ್ಮಿಕ ಮುಖಂಡರು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
    ತೀರ್ಪು ಏನೇ ಬರಲಿ. ಎಲ್ಲರೂ ಸಮಾಧಾನಚಿತ್ತದಿಂದ ಅದನ್ನು ಸ್ವೀಕರಿಸಬೇಕು. ಸಂಭ್ರಮಾಚರಣೆಯನ್ನು ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಷ್ಟೇ ಸೀಮಿತಗೊಳಿಸಬೇಕು. ಇನ್ನೊಂದು ಧರ್ಮದವರ ಭಾವನೆಗಳಿಗೆ ಧಕ್ಕೆ ತರದ ರೀತಿಯಲ್ಲಿ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪೇಜಾವರಶ್ರೀಗಳು ಈಗಾಗಲೆ ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries