ಮುಂಬೈ: ಅಯೋಧ್ಯೆ ಭೂ ವಿವಾದಕ್ಕೆ ಸಂಬAಧಿಸಿದAತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಇಂದು ನೀಡಿರುವ ತೀರ್ಪನ್ನು ಆರ್ ಎಸ್ ಎಸ್ ಸ್ವಾಗತಿಸಿದೆ.
ತೀರ್ಪು ಹೊರಬೀಳುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಎಸ್ ಎಸ್ ಸರಸಂಘಸAಚಾಲಕ ಮೋಹನ್ ಭಾಗವತ್, ಹಲವು ದಶಕಗಳಿಂದ ಮುಂದುವರೆದಿದ್ದ ಪ್ರಕರಣ ಸರಿಯಾಗಿ ಇತ್ಯರ್ಥಗೊಂಡಿದೆ. ಸುಪ್ರೀಂಕೋರ್ಟ್ ತೀರ್ಪುನ್ನು ಸ್ವಾಗತಿಸುವುದಾಗಿ ತಿಳಿಸಿದರು. ಇದನ್ನು ಗೆಲುವು ಅಥವಾ ಸೋಲು ಎಂದು ಪರಿಗಣಿಸಬಾರದು, ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಪ್ರತಿಯೊಬ್ಬರು ಮುಂದಾಗುವAತೆ ಮೋಹನ್ ಭಾಗವತ್ ಕರೆ ನೀಡಿದ್ದಾರೆ.