ಕಾಸರಗೋಡು: ಖಾಸಗಿ ಬಸ್ ಉದ್ದಿಮೆ ಭಾರೀ ಸಂದಿಗ್ಧತೆ ಎದುರಿಸುತ್ತಿದ್ದು, ತುರ್ತು ಪರಿಹಾರ ಕಂಡುಕೊಳ್ಳಬೇಕೆAದು ಆಗ್ರಹಿಸಿ ಚಳವಳಿ ಹೂಡಲು ಖಾಸಗಿ ಬಸ್ ಮಾಲಕರ ಸಂಘಟನೆಯಾದ ಕೇರಳ ಸ್ಟೇಟ್ ಪ್ರೆÊವೇಟ್ ಬಸ್ ಆನರ್ಸ್ ಪೆಡರೇಶನ್ ತೀರ್ಮಾನಿಸಿದೆ.
ನ.೧೩ ರಂದು ತಿರುವನಂತಪುರದ ಸೆಕ್ರೇಟರಿಯೇಟ್ ಪರಿಸರದಲ್ಲಿ ಖಾಸಗಿ ಬಸ್ ಮಾಲಕರು ಧರಣಿ ಮುಷ್ಕರ ನಡೆಸುವರು. ಆ ಬಳಿಕ ನ.೨೦ ರಂದು ಖಾಸಗಿ ಬಸ್ ಮಾಲಕರು ರಾಜ್ಯ ವ್ಯಾಪಕವಾಗಿ ಬಸ್ ಸೇವೆ ಮೊಟಕುಗೊಳಿಸಿ ಸೂಚನಾ ಮುಷ್ಕರ ನಡೆಸಲಿದ್ದಾರೆ.
ಸಾರ್ವಜನಿಕ ವಲಯ ಮತ್ತು ಖಾಸಗೀ ವಲಯಗಳನ್ನು ಸಮಾನವಾಗಿ ಸಂರಕ್ಷಿಸುವ ರೀತಿಯ ಸಾರಿಗೆ ನೀತಿ ರೂಪೀಕರಿಸಬೇಕು, ವಿದ್ಯಾರ್ಥಿಗಳ ಬಸ್ ಪ್ರಯಾಣ ದರ ಹೆಚ್ಚಿಸಬೇಕು, ಖಾಸಗಿ ಬಸ್‌ಗಳ ಹಾಗೇ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ವಿದ್ಯಾರ್ಥಿಗಳಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಾಗಿ ವಿಮಾ ಕಂತುಗಳನ್ನು ಶೇ.೬೫ ರಷ್ಟು ಹೆಚ್ಚಿಸಲಾಗಿದೆ. ೨೦೧೮ ಮಾರ್ಚ್ ತಿಂಗಳಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವ ವೇಳೆ ಒಂದು ಲೀಟರ್ ಡೀಸೆಲ್‌ಗಿದ್ದ ೬೪ ರೂ. ಬೆಲೆಯಲ್ಲಿ ಈಗ ಭಾರೀ ಹೆಚ್ಚಳವಾಗಿದೆ. ೨೦೧೧ ರಲ್ಲಿ ೩೪೦೦೦ ದಷ್ಟು ಖಾಸಗಿ ಬಸ್‌ಗಳು ರಾಜ್ಯದಲ್ಲಿ ಸೇವೆ ನಡೆಸುತ್ತಿತ್ತು. ಆದರೆ ಇಂದು ಅದು ೧೨೫೦೦ ಕ್ಕೆ ಕುಸಿದಿದೆ. ಇಂಧನ ಬೆಲೆ ಏರಿಕೆ, ವಿಮಾ ಕಂತುಗಳಲ್ಲಿ ಉಂಟಾಗುತ್ತಿರುವ ಹೆಚ್ಚಳ, ಸಿಬ್ಬಂದಿಗಳ ವೇತನ, ಟಯರ್, ಟ್ಯೂಬ್, ಲ್ಯೂಬ್ರಿಕೆಂಟ್ಸ್ ಇತ್ಯಾದಿಗಳ ಬೆಲೆಯಲ್ಲೂ ಹೆಚ್ಚಳ ಉಂಟಾಗಿದೆ. ಇದರಿಂದಾಗಿ ಖಾಸಗಿ ಬಸ್ ಉದ್ದಿಮೆ ಇಂದು ಭಾರೀ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದೆ. ಅದಕ್ಕೆ ಸರಕಾರ ತುರ್ತು ಪರಿಹಾರ ಕಂಡುಕೊಳ್ಳಬೇಕೆAದು ಪದಾಽಕಾರಿಗಳು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಗಿರೀಶ್, ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚ್ಚಕ್ಕಾಡ್, ಸಿ.ಎ.ಮೊಹಮ್ಮದ್ ಕುಂಞÂ, ಶಂಕರ್ ನಾÊಕ್, ಹಸೈನಾರ್, ಲಕ್ಷ್ಮಣನ್ ಮತ್ತು ಪಿ.ಎ.ಮುಹಮ್ಮದ್ ಕುಂಞÂ ಭಾಗವಹಿಸಿದರು.