ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಲವಾರು ವಿಭಾಗಗಳಲ್ಲಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.
ಹಿರಿಯ ಪ್ರಾಥಮಿಕ ವಿಭಾಗದ ಗೆರಟೆ ಆಕೃತಿಯಲ್ಲಿ ಆರನೇ ತರಗತಿಯ ಭವಿಷ್ ಎ ಗ್ರೇಡ್, ಶೀಟ್ ಮೆಟಲ್ ವರ್ಕ್ ನಲ್ಲಿ ೬ ನೇ ತರಗತಿಯ ಹರಿಪ್ರಸಾದ್ ಎ ಗ್ರೇಡ್, ವುಡ್ ಕಾರ್ವಿಂಗ್‌ನಲ್ಲಿ ಆರನೇ ತರಗತಿಯ ಪೂಜಾ ಬಿ ಗ್ರೇಡ್, ವುಡ್ ವರ್ಕ್ನಲ್ಲಿ ೬ನೇ ತರಗತಿಯ ವೈಶಾಕ್ ಎ ಗ್ರೇಡ್, ಗೊಂಬೆ ತಯಾರಿ ೫ನೇ ತರಗತಿಯ ತೌಸಿನ ಎ ಗ್ರೇಡ್, ಮೆಟಲ್ ಎಂಗ್ರೆವಿAಗ್‌ನಲ್ಲಿ ಏಳನೇ ತರಗತಿಯ ಫಾತಿಮತ್ ಮುಫಿದಾ ಎ ಗ್ರೇಡ್, ಎಂಬ್ರಾಯ್ಡರಿಯಲ್ಲಿ ೬ನೇ ತರಗತಿಯ ಅಶ್ವಿನಿ, ಪಾಮ್ ಲೀವ್ಸ್ನಲ್ಲಿ ೫ ನೇ ತರಗತಿಯ ಮೇಘಶ್ರೀ ಎ ಗ್ರೇಡ್ ಪಡೆದಿರುತ್ತಾರೆ.
ಕಿರಿಯ ಪ್ರಾಥಮಿಕ ವಿಭಾಗದ ವೃತ್ತಿ ಪರಿಚಯ ಮೇಳದಲ್ಲಿ ಕಾರ್ತಿಕ್ ೪ನೇ ತರಗತಿ ಎ ಗ್ರೇಡ್, ವುಡ್ ಕಾರ್ವಿಂಗ್‌ನಲ್ಲಿ ಚರಣ್ ರಾಜ್ ಎ ಗ್ರೇಡ್, ಶೀಟ್ ಮೆಟಲ್ ವರ್ಕ್ನಲ್ಲಿ ಮೂರನೇ ತರಗತಿಯ ತೇಜಸ್ ಎ ಗ್ರೇಡ್, ಬಿದಿರಿನ ಆಕೃತಿಯಲ್ಲಿ ಮೂರನೇ ತರಗತಿಯ ಹಿತೇಶ್ ಎ ಗ್ರೇಡ್ ಪಡೆದಿರುತ್ತಾರೆ. ವೃತ್ತಿ ಪರಿಚಯ ಮೇಳದಲ್ಲಿ ಉಪ ಜಿಲ್ಲೆಯಲ್ಲಿ ಮೂರನೇ ಸ್ಥಾನವನ್ನು ಹಿರಿಯ ಪ್ರಾಥಮಿಕ ಶಾಲೆ ಆನೆಕಲ್ಲು ಪಡೆದು ಕೊಂಡಿದೆ. ಇವರಿಗೆ ಹರೀಶ ವಿ. ಹಾಗೂ ಸಿತಾರ ಕಾದನ್ ಮಾರ್ಗದರ್ಶನವನ್ನು ನೀಡಿರುತ್ತಾರೆ. ಡಿಜಿಟಲ್ ಪೇಂಟಿAಗ್‌ನಲ್ಲಿ ಏಳನೇ ತರಗತಿಯ ವರ್ಷ ಬಿ ಗ್ರೇಡ್ ಪಡೆದಿರುತ್ತಾಳೆ. ವಿಜೇತ ಮಕ್ಕಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ವಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಎ.ಎಂ, ಶಾಲಾ ಪ್ರಬಂಧಕರು, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ, ಮಾತೃಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.