ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಕಾರ್ತಿಕ ಮಾಸ ದೀಪಾರಾಧನೆ ಉತ್ಸವದ ಮರುದಿನ ಅವಭೃತ ಪೂಜೆ ಓಕುಳಿ ಉತ್ಸವ ಸಂಭ್ರಮ ಸಡಗರದಿಂದ ನೆರವೇರಿತು.
ಮಧ್ಯಾಹ್ನ ಶ್ರೀ ದೇವರ ಅವಭೃತ ಪೂಜೆ ನಡೆದು ಉತ್ಸವ ಮೂರ್ತಿಯ ಪಾಲಕ್ಕಿ ಉತ್ಸವ ದೇವಸ್ಥಾನದ ಪರಿಸರದಲ್ಲಿ ನಡೆಯಿತು. ಬಳಿಕ ಶ್ರೀ ಕ್ಷೇತ್ರದ ಲಕ್ಷ್ಮೀ ತೀರ್ಥದಲ್ಲಿ ಅರ್ಚಕರು ಶ್ರೀ ದೇವರನ್ನು ತಲೆಯಲ್ಲಿ ಹೊತ್ತು ತೀರ್ಥ ಸ್ನಾನ ಮಾಡಿಸಿದರು. ಉತ್ಸವದ ಗೃಹಾಗಮನ, ಗೃಹ ಪ್ರವೇಶ ನಡೆದು ಆರತಿ ಮಾಡಲಾಯಿತು. ಸಂಜೆ ಸಂಪೆÇ್ರೀಕ್ಷಣೆ, ಸಾನಿಧ್ಯ ಹವನ ಮಾಡಲಾಗಿ ರಾತ್ರಿ ಪೂಜೆ ನಡೆಯಿತು. ಪ್ರಸಾದ ವಿತರಣೆ ನಂತರ ಸಮಾರಾಧನೆ ಜರುಗಿತು. ಸಮಾಜದ ಅನೇಕರು ಈ ಓಕುಳಿ ತೀರ್ಥ ಮಿಂದು ಧನ್ಯತೆ ಮೆರೆದರು.