ಮಂಜೇಶ್ವರ: ವರ್ಕಾಡಿ ಸಮೀಪದ ಪಡುಮೂಲೆ ಶ್ರೀಕುಮಾರ ಸ್ವಾಮಿ ಕ್ಷೇತ್ರದಲ್ಲಿ ನಾಳೆ(ಸೋಮವಾರ) ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಅಣ್ಣಪ್ಪ ದೈವದ ನೇಮೋತ್ಸವವು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಅಪರಾಹ್ನ ೪ ರಿಂದ ತೆಂಕುತಿಟ್ಟಿನ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಮೇಧಿನಿ ನಿರ್ಮಾಣ-ರತಿ ಕಲ್ಯಾಣ ಆಖ್ಯಾಯಿಕೆಯ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಪದ್ಮನಾಭ ಉಪಾಧ್ಯಾಯ, ಸುದರ್ಶನ ಬಾಯಾರು, ಮುಮ್ಮೇಳದಲ್ಲಿ ಬಂಟ್ವಾಳ ಜಯರಾಮ ಆಚಾರ್ಯ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಸಂತೋಷ್ ಕುಮಾರ್ ಮಾನ್ಯ, ಲಕ್ಷö್ಮಣಕುಮಾರ್ ಮರಕಡ, ಶಂಕರ ಆಚಾರ್ಯ ಕೋಳ್ಯೂರು, ಸಂದೀಪ್ ಕೋಳ್ಯೂರು, ಮನೀ಼ ಪಾಟಾಳಿ ಎಡನೀರು, ಅಶ್ವಥ್ ಮಂಜನಾಡಿ ಮೊದಲಾದವರು ಭಾಗವಹಿಸುವರು. ಸತೀಶ ಸುವರ್ಣ ದೈಗೋಳಿ ಕಾರ್ಯಕ್ರಮ ಸಂಯೋಜಿಸುವರು.
ನಾಳೆ ವರ್ಕಾಡಿ ಪಡುಮೂಲೆಯಲ್ಲಿ ಯಕ್ಷಗಾನ ಬಯಲಾಟ
0
ನವೆಂಬರ್ 09, 2019